ಚಿಂತೆ ಜಾರಲಿ ಚಿತೆಯು ಹೋಗಲಿ
ಒಲವು ಮಾತ್ರವೇ ಉಳಿಯಲಿ
ಸುಖದ ಸಾಗರ ಶಿವನ ಮಿಲನಕೆ
ಪ್ರೀತಿ ಮಾತ್ರವೆ ಬೆಳೆಯಲಿ
ಪ್ರಭುವಿಗೆಲ್ಲವ ಕೊಟ್ಟ ಮೇಲಕೆ
ಒಳಗೆ ಚಿಂತೆಯು ಯಾತಕೆ
ಪ್ರೀತಿ ತಂದೆಗೆ ಸಕಲ ಅರ್‍ಪಿಸಿ
ಮತ್ತೆ ಯೋಚನೆ ಯಾತಕೆ
ನಿನ್ನ ಬಳಿಗೆ ಇರುವದೆಲ್ಲವು
ಅವನ ಆಸ್ತಿಯು ನೀ ತಿಳಿ
ತ್ಯಾಗದಲ್ಲಿಯೆ ಭಾಗ್ಯ ಉಂಟು
ಅವನದೆಲ್ಲವ ನೀ ಪಡಿ
ಗಗನದೆತ್ತರ ನಿನ್ನ ಬಿತ್ತರ
ಎತ್ತರೆತ್ತರ ನೀ ಬೆಳಿ
ಶಿವನ ಹತ್ತಿರ ಎಲ್ಲ ಉತ್ತರ
ಸುರಿಸು ಶಾಂತಿಯ ಹೊಸಮಳಿ
*****