ತಪ್ಪು ಲೆಕ್ಕಾಚಾರ, ಕೂಡಿಸುವುದು, ಬಾಕಿ ತೋರಿಸುವುದು, ಮೀಟರ್‌ಗಳ ತಪ್ಪಿನಿಂದಾಗಿ ಹೆಚ್ಚು ಬಿಲ್ಲು ಬರೆದುಕೊಡುವುದು. ಇದೆಲ್ಲ ಗ್ರಾಹಕರಿಗೆ ಮಾಮೂಲಾಗಿದೆ. ಕೆ.ಪಿ.ಟಿ.ಸಿ. ಎಲ್. ನಿಂದಾದ ಕಿರಿಕಿರಿಗಳೆಂದು ಇದುವರೆಗೆ ಜನಭಾವಿಸಿದ್ದರು. ಇನ್ನು ಮುಂದೆ ಹಾಗಗಲಾರದು. ರಸೀದಿಯನ್ನಷ್ಟೇ ಕಂಪುಟರಿನಲ್ಲಿ ಕೊಡುವುದರ ಬದಲು ಮೀಟರ್ ರೀಡಿಂಗ್ ಸಹ ಪುಟ್ಟ ಯಂತ್ರದಲ್ಲಿ ತೋರಿಸಿ ಅಲ್ಲಿಯೇ ಒಂದಿಷ್ಟು ತಪ್ಪಾಗದಂತೆ ಬಿಲ್ಲುತೋರಿಸಿ, ರಸೀದಿ ನೀಡುವ ವ್ಯವಸ್ಥೆ ಗೊಳಿಸಲಾಗಿದೆ.
ನಗರ ಪಟ್ಟಣ ಪ್ರದೇಶಗಳಲ್ಲದೇ ಹಳ್ಳಿಹಳ್ಳಿಗೂ ತಲುಪಿ ಹೊಸ ಹೊಸ ರೀತಿಯ ವಿದ್ಯುತ್‌ಬಿಲ್ ನೀಡುವ ಮೂಲಕ ಗ್ರಾಹಕರಿಗೆ ಕುತೂಹಲ ಕೆರಳಿಸಿದೆ. ಹಿಂದಿನಂತೆ ಪದೇ ಪದೇ ತಲೆ ಎತ್ತಿ ನೋಡುವ ಕ್ರಿಯೆಗೆ ಸೆನ್ಸಾರ್ ಹಾಕಿರುವ ಈ ಯಂತ್ರ ಒಂದು ರೀತಿಯ ಕ್ಯಾಲ್ಯುಕುಲೇಟರ್ನಂತೆಯೇ ಕೆಲಸಮಾಡುತ್ತದೆ. ಮತ್ತು ವಿದ್ಯುತ್ ಮೂಲಕ ಬಿಲ್ಲು ನೀಡುವಾಗ ಒಮ್ಮೆ ಮೀಟರ್‌ನ ನಂಬರ್ ಹಾಗೂ ಮೀಟರ ಓಡಿರುವ ಯುನಿಟ್‌ಗಳನ್ನು ಫೀಡ್ ಮಾಡಿದರೆ ಸಾಕು. ಮಿಕ್ಕೆಲ್ಲ ಕೆಲಸಗಳನ್ನು ತನ್ನಿಂದ ತಾನೇ ಮಾಡಿ ಬಾಕಿ ಹಣ ಉಳಿದಿದ್ದರೆ ಅದನ್ನು ಸುಲಭವಾಗಿ ಈ ಯಂತ್ರ ತೋರಿಸುತ್ತದೆ. ಆರಂಭದಲ್ಲಿ ಕೆಲ ಬಿಲ್ಲುಗಳ ರೀಡರ್‌ಗಳ ತಪ್ಪಿನಿಂದಾಗಿ ಗೊಂದಲ ಸೃಷ್ಟಿಯಾಗುತ್ತಿತ್ತು. ಈ ಕಂಪ್ಯೂಟರಿಕೃತ ಬಿಲ್‌ರೀಡಿಂಗ್ ಯಂತ್ರವು ಸುವ್ಯವಸ್ಥಿತವಾಗಿ ಗೊಂದಲಗಳನ್ನು ನಿವಾರಿಸಿ ನೂತನ ಯಂತ್ರದ ಸಹಾಯದಿಂದ ಗ್ರಾಹಕರಿಗೆ ತಲುಪಿಸುತ್ತದೆ (ರಸೀದಿ) . ಜತೆಗೆ ಬಿಲ್ ಫೀಡ್ ಮಾಡಿದವರ ಹೆಸರೂ ಸಹ ಇದರಲ್ಲಿ ಅಚ್ಚಾಗಿರುತ್ತದೆ. ಒಟ್ಟಿನಲ್ಲಿ ವಿದ್ಯುತ್ ರೀಡಿಂಗ್ ಬಿಲ್ ಸಹ ಕಂಪ್ಯೂಟರೀಕರಣಗೊಂಡುದದು ಆಧುನಿಕತೆಗೆ ಸಾಕ್ಷಿಯಾಗಿದೆ. ಈ ಬಿಲ್ ರೀಡಿಂಗ್ ನಿಂದ ರಸೀದಿ ಪುಸ್ತಕಗಳನ್ನು ಮಾಡಿಸುವುದು, ಅವುಗಳನ್ನು ಫೈಲ್ ಮಾಡುವುದು ಕೂಡ ತಪ್ಪುತ್ತದೆ. ಇದು ಪ್ರತಿ ತಿಂಗಳೂ ಬರುತ್ತದೆ. ಈ ಯಂತ್ರದಿಂದ ಕಾರ್ಯಕ್ಷಮತೆ ಹೆಚ್ಚುತ್ತದೆ. ಗ್ರಾಹಕರಿಗೆ ಯಾಂತ್ರೀಕೃತ ಬಿಲ್ ನೀಡುವ ಮೂಲಕ ರಸೀದಿಯಲ್ಲಿ ತಿದ್ದುವ ತಪ್ಪು ಲೆಕ್ಕ ಬರೆಯಲು ಆಸ್ಪದ ಆಗದೇ ಇರುವುದರಿಂದ ಇದೊಂದು ವಿಜ್ಞಾನ ಕ್ಷೇತ್ರದ ಕೊಡುಗೆಯಾಗಿದೆ.
*****