ಭವ್ಯ ಭಾರತದ ಜನಸಂಖ್ಯೆಯೂ ಯಾರ ನಿಯಂತ್ರಣದಲ್ಲಿಲ್ಲ. ಬರೀ ಕಾಗದ ಪತ್ರ ಘೋಷಣೆಗಳನ್ನು ಬಿಟ್ಟರೆ, ಯಾವುದೇ ಒತ್ತಡ ಅರಿವು ಜಾಗ್ರತೆ ಮೂಡಿಸುವ ನಿಟ್ಟಿನಲ್ಲಿ ನಮ್ಮಲ್ಲಿ ಇಲ್ಲ.
ಕ್ರಿಸ್ತ ಶಕ ದಿನಾಂಕ ೩೦-೧೨-೨೦೨೨ರ ವೇಳೆಗೆ ಭವ್ಯ ಭಾರತದ ಸಂಖ್ಯೆಯು ಚೀನಾ ದೇಶವನ್ನು ಹಿಂದಿಕ್ಕಿ ಭಾರೀ ಮೇಲುಗೈ ಸಾಧಿಸಲಿದೆಯೆಂದು ಇತ್ತೀಚೆಗೆ ೨೦೧೫ರ ಆಗಸ್ಟ್‌ನಲ್ಲಿ ಬಿಡುಗಡೆ ಮಾಡಿದ ವಿಶ್ವಸಂಸ್ಥೆಯ “ವಿಶ್ವ ಜನಸಂಖ್ಯೆ ನಿರೀಕ್ಷೆಗಳು ೨೦೧೫ರ ಪರಿಷ್ಕರಣೆ” ಎಂಬ ಅಧ್ಯಯನ ವರದಿಯಲ್ಲಿ ವಿವರಿಸಿರುವುದು.
ವಿಶ್ವದಲ್ಲಿ ಸದ್ಯ ಚೀನಾ- ಭಾರತ ದೇಶಗಳು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಬಹುದೊಡ್ಡ ರಾಷ್ಟ್ರಗಳಾಗಿವೆ. ೨೦೨೨ರ ವೇಳೆಗೆ ಭಾರತವು ಚೀನಾ ದೇಶವನ್ನು ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವೆಂದು ಗುರ್‍ತಿಸಿಕೊಳ್ಳಲಿದೆಯೆಂದೂ ಇಡೀ ವಿಶ್ವದ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ ೧೯% ರಷ್ಟು ಚೀನಾದ ಜನಸಂಖ್ಯೆ ಯಾಗಿದ್ದರೆ ಶೇಕಡಾ ೧೮% ರಷ್ಟು ಭವ್ಯ ಭಾರತದ್ದಾಗಿದೆಯೆಂದು ವಿಶ್ವಸಂಸ್ಥೆ ದಿನಾಂಕ ೦೬-೦೮-೨೦೧೫ರಂದು ಬಹಿರಂಗ ಪಡಿಸಿದೆ.
ನೈಜೀರಿಯಾ ಏಷ್ಯಾದ ಐದು ರಾಷ್ಟ್ರಗಳಾದ ಬಾಂಗ್ಲಾದೇಶ, ಚೀನಾ, ಭವ್ಯಭಾರತ, ಇಂಡೋನೇಷ್ಯಾ ಹಾಗೂ ಪಾಕಿಸ್ತಾನ, ಲ್ಯಾಟಿನ್ ಅಮೇರಿಕಾದ ಎರಡು ದೇಶಗಳಾದ ಬ್ರೆಜಿಲ್ ಮತ್ತು ಮೆಕ್ಸಿಕೊ, ಉತ್ತರ ಅಮೆರಿಕ ಹಾಗೂ ಯುರೋಫ್ (ರಷ್ಯಾ ಒಕ್ಕೂಟ) ಇವೆಲ್ಲವು ಜಗತ್ತಿನ ತೀರಾ ಹೆಚ್ಚೆಚ್ಚು ಜನಸಂಖ್ಯೆವುಳ್ಳ ಹತ್ತು ಬೃಹತ್ ರಾಷ್ಟ್ರಗಳೆನಿಸಿವೆಯೆಂದು ವಿಶ್ವಸಂಸ್ಥೆಯು ತೀರಾ ಕಳವಳ ವ್ಯಕ್ತಪಡಿಸಿ ಅಂಕಿ ಅಂಶಗಳನ್ನು ಕೂಡಾ ಬಿಡುಗಡೆ ಮಾಡಿರುವುದು.
ಇಡೀ ವಿಶ್ವದ ಒಟ್ಟು ಜನಸಂಖ್ಯೆಯು ೨೦೧೫ಕ್ಕೆ ೭೩೦ ಕೋಟಿ ಇರುವುದು. ಇದೇ ಜನಸಂಖ್ಯೆಯು ೨೦೩೦ಕ್ಕೆ ಒಂದು ಅಂದಾಜಿನ ಪ್ರಕಾರ ೮೫೦ ಕೋಟಿ ಬೆಳೆಯುವ ಎಲ್ಲ ಲಕ್ಷಣಗಳು ಕಂಡು ಬರುತ್ತಿವೆಯೆಂದು ವಿಶ್ವಸಂಸ್ಥೆಯ ಅಧ್ಯಯನ ವರದಿಯು ಬಹಿರಂಗಗೊಳಿಸಿರುವುದು.
ಆದ್ದರಿಂದ ಪ್ರತಿ ಮನೆಮನೆಯಲ್ಲಿ, ಹಳ್ಳಿಹಳ್ಳಿಗಳಲ್ಲಿ, ಪಟ್ಟಣ ಪ್ರದೇಶಗಳಲ್ಲಿ ಒಂದು ಬೇಕು ಎರಡು ಮಕ್ಕಳು ಸಾಕು. ಹೆಣ್ಣಿರಲಿ ಗಂಡಿರಲಿ ಎರಡು ಮಕ್ಕಳಿರಲಿ ಎಂದು ಕಡ್ಡಾಯ ಮಾಡುವ ಕಾಯ್ದೆ ಕಾನೂನು ಕಟ್ಟುನಿಟ್ಟು ಮಾಡುವ ಎಲ್ಲಾ ಮನ ಒಲಿಸುವ ಕೆಲಸ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ನಾವು ನೀವು ಸಾಗೋಣವಲ್ಲವೇ??
*****