ರಾಮಾ ನಿನ್ನೆದುರಿನಲಿ ನಿಂತು
ರಾಗದಿಂದ ರೋದಿಸುತ್ತಿರುವೆ ನಾನು
ಅರಿಯಲಾಗದೆ ನಿ ನನ್ನಂತರಂಗ
ಮಾಡಲಾಗದ ನೀನು ಪಾಪಭಂಗ
ಹೇಳು ಹೇಳು ನಾನೆಲ್ಲಿ ತಪ್ಪಿರುವೆ
ಸ್ವಚ್ಛ ಆಸೆಗಳ ಕೂಪವೇ ಎನ್ನಲಿ
ಎನ್ನ ಪುಟ್ಟ ಹೃದಯದಲ್ಲಿ ಶ್ವೇತವಿಲ್ಲವೆ
ದುಕ್ಕ ಮೊರೆಗಳೆಲ್ಲ ಹುಸಿಯೇ ಕಣ್ಣಲಿ
ನಾನು ಕೃಪೆವಿಲ್ಲದ ಬಡವನೇನು
ರಾಮಾ ನೀನಿನ್ನು ಎನ್ನ ಕಾಡಿಸದಿರು
ನನ್ನ ನಡೆ ನುಡಿಗಳ ವೀಕ್ಷಿಸುತ್ತ ನಿ
ವ್ಯರ್ಥ ಜೀವನವೆಲ್ಲ ಆಡಿಸದಿರು
ರಾಮಾ ರಾಮ ಎಂಬ ಪ್ರಲೋಭನೆ
ಆಲಿಸು ನಿನ್ನೊಮ್ಮೆ ದರ್ಶಿಸಿ ಎನ್ನ
ನಿನ್ನೆದುರಿನಲ್ಲಿ ಹಾಸಿರುವೆ ಈ ಸೆರಗನ್ನ
ಕೃಪೆ ಭಿಕ್ಷೆ ನೀಡಿ ಎತ್ತಿಕೊ ಎನ್ನ
ಎನ್ನದೆಯಲಿ ಖಿನ್ನತೆ ಪಾಷಾಣವಿಟ್ಟು
ಮರೆಯಿಸು ಈ ಲೌಕಿಕ ಕುಸುಮ
ಮತ್ತೆ ಮತ್ತೆ ನಾನು ಭವಕೆ ಬಾರದಂತೆ
ಮಾಣಿಕ್ಯ ವಿಠಲನಿಗೆ ಈ ಸುಮ
*****