ಕೈ ತುಂಬ ಹಣ
ಕೈ ತುಂಬ ಅವಕಾಶ
ಇದ್ದಾಗ ನೆನಪಾಗಲಿಲ್ಲ
ಪಾಪ ಅಸಹಾಯ –
ಪುರಸೊತ್ತೂ ಇರಲಿಲ್ಲ ಎನ್ನಿ
ಬಹುಜನ ಹಿತಾಯ
ಬಹುಜನ ಸುಖಾಯ
ಮಂತ್ರ ಪಠಿಸುವುದಕ್ಕೆ
ಆದರೂ ಏನಿದೆ ಧಕ್ಕೆ ?
ಸಾಯುವೆ ರಸ್ತೆಯ ಮೇಲೆ
ತಾನು ಸತ್ತರೇ ಉಪಕಾರ
ಇನ್ನು ರಸ್ತೆಯ ಮೇಲೆ
ಸತ್ತರೆ ಮತ್ತೂ ಉಪಕಾರ
ಎಂದೆಲ್ಲಾ ಯೋಚಿಸಿ
ಸತ್ತ ರಸ್ತೆಯ ಮೇಲೆ
ಸತ್ತರೆ ಸಾಯಲಿ ಬಿಡೋ
ಎಂಬ ತಾತ್ಸಾರಕ್ಕೆ
ಕೊಳೆಯಿತು ಹೆಣ
ನಕ್ಕವು
ನೆಕ್ಕಿದವು ನೊಣ
ತನ್ನ ಸ್ವಾರ್ಥವ ನೆನೆದು
ವ್ಯರ್ಥವಾಗಿಹ ಜೀವ
ಈ ರೀತಿ
ಸತ್ತ ಮೇಲಾದರೂ ಸೇವೆಗೆ ನಿಂತು
ಕೇರಿ ಕೇರಿಗೆ ಎಲ್ಲಾ
ವಾಸನೆ ತಂತು
ಆದರೂ
ನೊಣ ನಾಯಿ ನರಿಗಳಿಗೆ
ಭೋಜನ ಬಡಿಸಿದ ಪುಣ್ಯ
ಬಂದೇ ಬಂತು.
*****