ಏರಿತು ಗಗನಕೆ ನಮ ಧ್ವಜ!

ಏರಿತು ಗಗನಕೆ ನಮ್ಮ ಧ್ವಜ!
ಭಾರತ ಭಾಗ್ಯ ರವಿಯ ತೇಜ !


ಮರವೆಯಿಂದ ಜನಮನ ಜಾಗರಿಸಿ,
ಪರದಾಸ್ಯದ ಜಾಲದ ಭಯ ಹರಿಸಿ,
ಹುರುಳ ಹುರುಪನೀ ಬಾಳಲಿ ಬೆರಸಿ,
ಏರಿತು ಗಗನಕೆ ನಮ್ಮ ಧ್ವಜ-
ಭಾರತ ಶಕ್ತಿಯ ವೀರಭುಜ !


‘ಎಲ್ಲಿದೆ ಬಂಧನ ಬಲದಾಕ್ರಮಣ ?
ಎಲ್ಲಿದೆ ಶಾಸನರಾಹುಗ್ರಹಣ ?
ಎಲ್ಲವ ನಿಲ್ಲಿಸಿ ಬಿಡುವೆನೀ ಕ್ಷಣ!’
ಸಾರುವುದೀತೆರ ನಮ್ಮ ಧ್ವಜ-
ಭಾರತ ಪೌರುಷ ಸುರಭೂಜ!


ದೇಶ-ದೇಶಗಳ ಜನತೆಗೆ ಅನ್ನ,
ಪಾಶವ ಹಿಂಸೆಯ ತಡೆಯುವ ತ್ರಾಣ,
ತೋಷದಿ ಬಾಳುವ ಸಮತೆಯ ಜ್ಞಾನ
ಬೀರಲು ಏರಿದೆ ನಮ್ಮ ಧ್ವಜ-
ಭಾರತ ರಾಷ್ಟ್ರೋದಯ ತೇಜ!
* * *
ಏರಿತು ಗಗನಕೆ ನಮ್ಮ ಧ್ವಜ-
ಭಾರತ ಭಾಗ್ಯರವಿಯ ತೇಜ !
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತೊಣ್ಣೂರಿನ ಸೊಬಗು
Next post ನಮಸ್ತೇ!

ಸಣ್ಣ ಕತೆ

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…