ಪ್ರಕೃತಿ ದೇವಿಯೆ ಮೈ ತಾಳಿ ನಿಂತಿಹಳು
ತೋಣ್ಣೂರು ಗ್ರಾಮದಲ್ಲಿ
ಹಸಿರು ಸೀರೆಯ ಮೇಲೆ ಹಳದಿಯರಮಣಿ
ಕಿಲಕಿಲನೆ ನಗುತಿಹಳು ಮನವ ಸೆಳೆಯುತಲಿ
ಸುತ್ತ ನಿಂತ ಶಿಖರಗಳ ಸಾಲುಕೈಚಾಚಿ
ಕರೆಯುತಿದೆ ನೋಡ ಬನ್ನಿ
ಸುಂದರ ವನಪುಷ್ಪರಾಶಿಗಳ ನಡುವೆ
ಮಣಿ ಮುತ್ತುಗಳೆ ಅಲೆ ಅಲೆಗಳಾಗಿ
ಶಾಂತತೆಯಲಿ ಜೋಗುಳ ಹಾಡುತ್ತ ತಾಯಿ
ಮೋತಿ ತಲಾಬ್ ಹಸನ್ಮುಖಿಯಾಗಿಹಳು
ನಂಬಿ ನಾರಾಯಣ ವೇಣುಗೋಪಾಲರು
ಕೊಳಲನೂದುತ ಕರೆಯನಿತ್ತಿಹರು
ಉಗ್ರನಾರಾಸಿಂಹನ ನಮಿಸಿ
ಹೊಯ್ಸಳ ಸಾಮ್ರಾಜ್ಯವ ವರ್‍ಣಿಸಿದರು
ರಾಮಾನುಜಚಾರ್‍ಯರು ಕವಿ ಪುಂಗವರು
ಲಲಿತಕಲೆಗಳ ಬೀಡಿದು
ಸುವರ್‍ಣಯುಗದ ಕಲ್ಪ ತರುಲತೆಗಳು
ವಿಷ್ಣುವರ್ಧನ ಶಾಂತಲೆಯ ನಯನಗಳು
ಹೊಯ್ಸಳನ ಆತ್ಮವ ನೋಡಬನ್ನಿ
ಜಗದಿ ನೆಲೆಸಿದ ಮಾನವರೇ ಆಲಿಸಿ
ಕನ್ನಡಾಂಬೆ ಮಡಿಲತಾಣವು
ಚರಿತ್ರೆಯ ಪುಟ ಪುಟಗಳಲ್ಲಿ
ಪುಟವಿಟ್ಟ ಚಿನ್ನದಂತೆ ಕೇಳಿರಿ
*****