ಯೆಂಡ

ಯಂಗೀಸ್ಗ್ ಎಂಗೆ ಅರಸ್ನ ಕುಂಕ್ಮ-
ಗಂಡೀಗ್ಗ್ ಅಂಗೆ ಯೆಂಡ.
ವುಟ್ಟದ್ ಮನ್ಸ ರುಂಡಾಂತ್ ಅಂದ್ರೆ
ಯೆಂಡದ್ ಬುಂಡೆ ಮುಂಡ. ೧

ಬೂಮೀ ಜನಗೊಳ್ ಯೆಂಡದ್ ಮರಕೆ
ಊವು ಕಾಯ್ ಇದ್ದಂಗೆ.
ಯೆಂಡದ್ ಮರಕೇ ಬತ್ತಿ ಕೊಟ್ರೆ
ಮನ್ಸ ಬದಕೊದ್ ಎಂಗೆ? ೨

ಮನ್ಸಾಂತ್ ಅನ್ನೋ ಮೀನ್ ಬದಕೊದ್ಕೆ
ಯೆಂಡದ್ ನೀರೇ ಮುಕ್ಯ!
ಅನಬೋವಸ್ತನ್ ಮಾತ್ ಸುಳ್ಳಾಗ್ದು-
ಸತ್ಯ ರತ್ನನ್ ವಾಕ್ಯ! ೩

ಮನ್ಸನ್ ಜನ್ಮ ಬಂದಿದ್ರೂನೆ
ಯೀರ್‍ದೆ ವೋದ್ರೆ ಯೆಂಡ-
ಅಂತಾ ಮನ್ಸ ಬೂಮೀಗ್ ಬಾರ!
ಬದಕಿರೋದು ದಂಡ! ೪
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಳಯ ಸೃಷ್ಟಿ
Next post ತೊಣ್ಣೂರಿನ ಸೊಬಗು

ಸಣ್ಣ ಕತೆ

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…