ಹೋಗಿ ಬರುವೆನು ನನ್ನ ಎಳೆಗನಸುಗಳೆ! ನಿಮ್ಮ
ತಳಿರ್‍ಗೆಂಪು ಹೂಗಂಪು ತಂಗಾಳಿ ಮುಗಿದು
ಸಮರವನು ಸಾರಿಹುದು ಅಮರ ಶಕ್ತಿಯದೊಂದು,
ಎದೆಮನವ ತಣಿಸಿರುವ ದಿನಗಳನೆ ಹುಗಿದು!
ನಿಂತಿರುವದೆದುರಾಳಿಯಾಗಿ ನನಸಿನ ಕಹಿಯು,
ಪ್ರಾಣಗಳ ಗಂಟೆಯನು ಗಣಗಣನೆ ಬಡಿದು;
ಪಾಪಸಂಚಯವೆಲ್ಲವಾಗಿ ಕೋಪಿಸಿದಹಿಯು
ಮಲೆತು ನಿಂತಿಹುದೀಗ ಮುಗಿಲುದ್ದ ತಡೆದು:
ಸಾಕಿನ್ನು ಕನಸಿಗನ ದಿವ್ಯ ದೀವಟಿಗೆ!
ಸಾಕು ವಂದನೆಯನ್ನು ಒಲವೆಂಬ ನಟಿಗೆ!
ಹೋಗಿ ಬರುವೆನು ಕನಸೆ! ಹೋಗಿ ಬರುವೆನು ಸೊಗಸೆ!
ನನ್ನ ಮರೆಯಲಿ ನಿನ್ನ ಕಂಗಳಾ ಬೊಗಸೆ !
*****
Related Post
ಸಣ್ಣ ಕತೆ
-
ಮೌನವು ಮುದ್ದಿಗಾಗಿ!
ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…
-
ಅಹಮ್ ಬ್ರಹ್ಮಾಸ್ಮಿ
ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…
-
ಗೃಹವ್ಯವಸ್ಥೆ
ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…
-
ಮಾದಿತನ
ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…
-
ಸಂಶೋಧನೆ
ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…