ಕೆಲವರಿಗೆ ಮರೆಗುಳಿತನ ವಂಶ ಪರಂಪರೆಯಾಗಿ ಬಂದಿರುತ್ತದೆ. ವಯಸ್ಸು ಸಣ್ಣದಿರಲಿ ದೊಡ್ಡದಿರಲಿ ಮರೆಗುಳಿತನ ಜಾಸ್ತಿಯಿರುವುದು, ಮರೆವು ಒಂದು ವರದಾನ. ಕಹಿಯನ್ನು ಮರೆಯಲು ದೇವರಿತ್ತ ವರವು. ಇದರಿಂದಾಗಿ ತುಸು ನೆಮ್ಮದಿ, ತೃಪ್ತಿ, ಶಾಂತಿ ಲಭಿಸಲು ಕಾರಣವಾಗಿದೆ. ಮರೆವು ಬೇಕು. ಆದರೆ ಅದೇ ಜಾಸ್ತಿಯಾದರೆ…. ಜೀವನ ನೀರಸನವಾಗುವುದು.
ಈ ಮರೆಗುಳಿತನಕ್ಕೆ ಕಾರಣವೇನು? ವಯಸ್ಸಾಗುತ್ತಾ… ಬರುಬರುತ್ತಾ… ಮರೆವು ಸಹಜವೇ? ನಿಜಕ್ಕೂ ಮರೆವು ಒಂದು ವರದಾನವೇ? ಇದೊಂದು ಕಾಯಿಲೆಯೇ?
– ಹೀಗೆ ಹಲವು ಪ್ರಶ್ನೆಗಳನ್ನಿಟ್ಟುಕೊಂಡು ಶಾಶ್ವತ ಪರಿಹಾರ ನೀಡುವ ಔಷಧಿ ಕಂಡು ಹಿಡಿಯಲು ವಿಶ್ವದಾದ್ಯಂತ ನಿರಂತರವಾಗಿ…. ಹಲವು ಸಂಶೋಧನೆಗಳು ಈಗಾಗಲೇ ಜರುಗುತ್ತಿವೆ.
ಈಗೀಗ ಘಟಾನುಘಟಿ ವೈದ್ಯರು, ನರತಜ್ಞರು, ವಿಜ್ಞಾನಿಗಳು… ಈಗಲೂ ಈ ಕಾಯಿಲೆಗೆ ಔಷಧಿಯನ್ನು ನಿಖರ ಕಾರ್‍ಯ ಕಾರಣವನ್ನು ಪರಿಹಾರವನ್ನು ಕಂಡು ಹಿಡಿಯಲು ಶ್ರಮಿಸುತ್ತಿದ್ದಾರೆ.
ಆದರೆ… ಜುಲೈ ೨೦೧೫ ರಲ್ಲಿ ಸರ್ರೆಯ ಕ್ರಿಟಿನ್ ನಿತ್ಯಾನಂದನ್ ಲಂಡನ್ ಶಾಲಾ ಬಾಲಕ ವಯಸ್ಸು ೧೫ ವರ್ಷ ಭಾರತೀಯ ಮೂಲದ ಬ್ರಿಟೀಶ್ ಪ್ರಜೆಯಾದ ಈತ ಈಗ ಮರೆಗುಳಿತನಕ್ಕೆ ಪರಿಹಾರ ಕಂಡು ಹಿಡಿದು, ಇಡೀ ಜಗತ್ತನ್ನು ನಿಬ್ಬೆರಗುಗೊಳಿಸಿದ್ದಾನೆ. ಅಬ್ಬಾ! ವಯಸ್ಸು ಕಿರಿದು ಸಾಧನೆ ಹಿರಿದು ಎಂದು ಹುಬ್ಬೇರುವಂತೆ ಮಾಡಿದ್ದಾನೆ. ಈ ಮರೆಗುಳಿತನ ಕಾಣಿಸಿಕೊಳ್ಳುವ ಹತ್ತು ವರ್ಷ ಮೊದಲೇ ಈ ರೋಗ ಲಕ್ಷಣಗಳನ್ನು ಗುರ್ತಿಸಿ ತಡೆಗಟ್ಟುವ ವಿಧಿವಿಧಾನವನ್ನು ಕಂಡು ಹಿಡಿದಿರುವನು.
ಈತನು ತನ್ನೆಲ್ಲ ಪ್ರಯೋಗ ವಿವರವಾದ ಸಂಶೋಧನಾ ವರದಿಗಳನ್ನು ಈಗಾಗಲೇ “ಗೂಗಲ್ ಸೈನ್ಸ್ ಫೇರ್ ಪ್ರೈಜ್‌ಗೆ” ಕಳಿಸಿದ್ದಾನೆ. ಅಲ್ಲಿ ಅಂತಿಮವಾಗಿದ್ದು ಬಹುಮಾನ ಕೂಡಾ ಬಂದಿದೆ!
ಈತನಕ ಮರೆಗುಳಿಗೆ ದಿವ್ಯ ಔಷಧಿಯನ್ನು ಕಂಡು ಹಿಡಿಯಲು ಹಲವು ಥರದ ಅರಿವಿನ ನಾನಾ ಪರೀಕ್ಷೆಗಳನ್ನು ನಡೆಸಬೇಕಾಗಿತ್ತು! ಇಲ್ಲವೆ ವ್ಯಕ್ತಿಯ ಸಾವಿನ ತರುವಾಯ ಆತನ ಮೆದುಳನ್ನು ಪರೀಕ್ಷೆಗೆ ಒಡ್ಡಬೇಕಾಗಿತ್ತು. ಇದು ಪೋಸ್ಟ್‌ಮಾರ್‍ಟಂ ಕೆಲಸವಾಗಿತ್ತು!
ಆದರೆ… ಸರ್ರೆಯ ಕ್ರಿಟನ್ ನಿತ್ಯಾನಂದನ್ ಈಗ ತಾನು ಟ್ರೋಜನ್ ಹಾರ್ಸ್ ಎಂಬ ಪ್ರತಿಕಾಯವನ್ನು ಬಹಳ ಕಷ್ಟಪಟ್ಟು ಸಂಶೋಧಿಸಿದ್ದು ಅದು ಮೆದುಳನ್ನು ಸಲೀಸಾಗಿ ಹೊಕ್ಕು ಅಲ್ಲಿರುವ ಮರೆಗುಳಿತನ ತರುವ ನ್ಯೂರೋಟಾಕ್ಸಿಕ್ ಪ್ರೋಟಿನ್‌ಗಳ ಜತೆ ಕೂಡಿಕೊಳ್ಳುವುವು…. ಹೀಗಾಗಿ ಮೊತ್ತ ಮೊದಲ ಪ್ರಯತ್ನದಲ್ಲಿಯೇ ಮರೆಗುಳಿತನವನ್ನು ಗುರ್ತಿಸಿದ್ದು ಪರಿಹಾರವೂ ದೊರಕಿರುವುದು!
ಈಗೀಗ ಬ್ರಿಟನ್ ದೇಶದಲ್ಲೇನು… ಇತರ ದೇಶ ವಿದೇಶಗಳಲ್ಲಿ ಕೂಡಾ ಮರೆಗುಳಿತನ ಬಹುದೊಡ್ಡ ಕಾಯಿಲೆಯಾಗಿ ಉಲ್ಬಣಗೊಳ್ಳುತ್ತಿದ್ದು ಇದಕ್ಕೊಂದು ಪರಿಹಾರ ಸಿಕ್ಕಂತಾಗಿದೆಯೆಂದು ನಿತ್ಯಾನಂದನ್ ಈಗಾಗಲೇ ಅಭಿಮಾನದಿಂದ ಸಾರಿಕೊಂಡಿದ್ದಾನೆ.
ನಾವು ನೀವು ಎಲ್ಲರೂ ನಿತ್ಯಾನಂದನ್‌ಗೆ ಆಲ್ ದಿ ಬೆಸ್ಟ್ ಹೇಳೋಣವಲ್ಲವೇ?
*****