“ಇನ್ನು ಮುಂದೆ ರೋಬೊಟ್‌ಗಳು ಬೇಕಾಗಿವೆ!” ಎಂಬ ಜಾಹೀರಾತು ನೀಡುವ ಕಾಲವಿನ್ನು ದೂರವಿಲ್ಲ!
ಒಂದು ರೋಬೊಟ್- ಸರಾಸರಿ ೬ ರಿಂದ ೮ ಕಾರ್‍ಮಿಕರ ಕೆಲಸ ಕಾರ್‍ಯಗಳನ್ನು ಸುಗಮವಾಗಿ ಅಚ್ಚುಕಟ್ಟಾಗಿ ನಿರ್ವಹಿಸುತ್ತಿವೆಂದು ಚೀನಾದೇಶದ ಬೀಜಿಂಗ್‌ನಲ್ಲಿ ಸಾಬೀತು ಪಡಿಸಿರುವುದು.
ಈಗಾಗಲೇ ಚೀನಾದ ಡಂಗೌನ್ ನಗರದ ಮೊಬೈಲ್ ಫೋನ್ ಉತ್ಪಾದನಾ ಘಟಕವು ಸಂಪೂರ್ಣವಾಗಿ ಮಾನವ ರಹಿತವಾಗಿದ್ದು ಅಲ್ಲಿನ ಎಲ್ಲಾ ಕೆಲಸ ಕಾರ್‍ಯಗಳನ್ನೂ ಅಲ್ಲಿನ ಕಂಪ್ಯೂಟರ್ ನಿಯಂತ್ರಿತ ರೋಬೊಟ್‌ಗಳು ಈಗಾಗಲೇ ಪರಿಪೂರ್ಣವಾಗಿ ಕೆಲಸ ನಿರ್ವಹಿಸಿ ವಿಶ್ವವ್ಯಾಪ್ತಿ ಶಹಭಾಸ್‌ಗಿರಿ ಪಡೆದಿವೆ…!
ಈಗೀಗ ಅಲ್ಲಲ್ಲಿ… ಚೀನಾದಲ್ಲಿ “ರೋಬೊಟ್‌ಗಳು ಬೇಕಾಗಿವೆ…” ಎಂಬ ನಾಮಫಲಕಗಳೂ ಜಾಹೀರಾತುಗಳು ರಾರಾಜಿಸುತ್ತಿವೆ!!
ಚೀನಾ ದೇಶದಲ್ಲಿ ಈಗಾಗಲೇ ಕಟ್ಟುನಿಟ್ಟಿನ ಜನಸಂಖ್ಯೆ ನಿಯಂತ್ರಣಾ ಭಾರೀ ಭಾರೀ ಕ್ರಮದಿಂದಾಗಿ ಅಲ್ಲಿನ ಜನಸಂಖ್ಯೆ ಗಣನೀಯವಾಗಿ ಇಳಿಮುಖ ಕಂಡಿದೆ. ಹೀಗಾಗಿ ಎಲ್ಲೆಲ್ಲೂ ಕಾರ್ಮಿಕರ ಬೃಹತ್ ಸಮಸ್ಯೆ ತಲೆದೋರಿದೆ. ಇದರಿಂದಾಗಿ – ಇನ್ನು ಮುಂದೆ ರೋಬೊಟ್‌ಗಳನ್ನೇ ಹೆಚ್ಚೆಚ್ಚು ಅಭಿವೃದ್ಧಿ ಪಡಿಸಬೇಕಾದ ತುರ್‍ತು ಅಲ್ಲಿ ತಲೆದೋರಿದೆ.
ಇಲ್ಲಿನ ಡಂಗೌನ್ ನಗರದ ಮೊಬೈಲ್ ಫೋನ್ ಉತ್ಪಾದನಾ ಘಟಕದಲ್ಲಿ ಎಲ್ಲ ಕೆಲಸಗಳನ್ನು ಕಂಪ್ಯೂಟರ್ ನಿಯಂತ್ರಿತ ರೋಬೊಟ್‌ಗಳು ಮಾಡಿ ಪೂರೈಸುತ್ತಿವೆ. ಚೀನಾದಲ್ಲಿ ಇದೇ ಮೊತ್ತ ಮೊದಲ ಬಾರಿಗೆ ಜನರಿಲ್ಲದ ಮೊದಲ ಕಾರ್ಖಾನೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಕಂಪೆನಿಯ ಎಲ್ಲ ಸರಕು ಸಾಗಣೆ ಟ್ರಕ್‌ಗಳು ರೋಬೊಟ್‌ಗಳ ಮೂಲಕ ಗೋದಾಮುಗಳಿಗೆ ಸರಕುಗಳನ್ನು ಸಾಗಿಸುತ್ತವೆ. ತಾಂತ್ರಿಕ ಸಿಬ್ಬಂದಿ ನಿಯಂತ್ರಣ ಕಚೇರಿಯಲ್ಲಿ ಕಂಪ್ಯೂಟರ್‌ನಲ್ಲಿ ಕೆಲಸ ಕಾರ್ಯಗಳನ್ನು ನೋಡುತ್ತಾರೆ. ಉಳಿದಂತೆಲ್ಲವನ್ನೂ ಸಂಪೂರ್ಣವಾಗಿ ಈ ಎಲ್ಲ ರೊಬೋಟ್‌ಗಳೇ ಮಾಡುತ್ತವೆ.
ಇಲ್ಲಿ ಸುಮಾರು ೬೫೦ ಜನ ಕಾರ್‍ಮಿಕರು ಕೆಲಸ ನಿರ್ವಹಿಸಬೇಕು. ಆದರೆ ೬೦ ಕಾರ್ಮಿಕರು ಮಾತ್ರ ಕೆಲಸ ಮಾಡುತ್ತಿದ್ದಾರೆ! ಇದನ್ನು ೨೦ ಕ್ಕೆ ಇಳಿಸುವ ಚಿಂತನೆ ನಡೆಸುತ್ತಿದ್ದು ಇನ್ನು ೫ ರೋಬೊಟ್‌ಗಳನ್ನು ಹೆಚ್ಚಿಸಲು ಕ್ರಮ ಕೈಗೊಂಡಿರುವರು.
ಬೇರೆ ಬೇರೆ ರಾಷ್ಟ್ರದವರೆಲ್ಲ ಬಂದು ಒಂದು ಕಾರ್ಮಿಕರಿಲ್ಲದ ಕಂಪೆನಿಯನ್ನು ಕುತೂಹಲದಿಂದ ನೋಡುತ್ತಿದ್ದಾರೆ. ಇಂಥಾದೊಂದು ಜನರಿಲ್ಲದ ಕಾರ್ಖಾನೆ ಆರಂಭಿಸುವ ಚಿಂತನೆ ನಡೆಸಿರುವರು.
ಬರುಬರುತ್ತಾ ಜನರಿಲ್ಲದ ಕಾರ್ಖಾನೆಗಳನ್ನು ಎಲ್ಲ ದೇಶ ವಿದೇಶಗಳಲ್ಲಿ ಆರಂಭಿಸಿದರೆ ಮುಂದಿನ ಜನಾಂಗದ ಗತಿ ಹೇಗೆಂದು ಈಗಾಗಲೇ ಚಿಂತೆಯಾಗಿದೆ…
*****