ನಗುವ ಗಗನವೆ ಮುಗಿಲ ಮೇಘವೆ
ಯಾಕೆ ನನ್ನನು ಕೂಗುವೆ
ಮುಗಿಲ ನೀರಿನ ಮುತ್ತು ತೂರುತ
ಯಾಕೆ ನನ್ನನು ಕಾಡುವೆ
ಗಟ್ಟಿ ಹುಡುಗನು ಗುಟ್ಟು ಒಡೆದನೆ
ನನ್ನ ಸೀರೆಯ ಸೆಳೆದನೆ
ಅಂತರಾತ್ಮದ ಗಿಡದ ಮಂಗನು
ಅಂಗುಲಾಗವ ಹೊಡೆದನೆ
ಇಗಾ ಪಾತರಗಿತ್ತಿ ಸುಬ್ಬಿಗೆ
ಹೂವು ಧೂಳಿಯ ಉಗ್ಗಿತೇ
ಮಂದ ಬುದ್ಧಿಯ ಮರದ ಇಣಚಿಗೆ
ಬಿಸಿಲ ಬಡಿಗೆಯು ಬಡಿಯಿತೇ
ಅಂತರಾತ್ಮದ ಆಳ ಕೊಳದಲಿ
ಇಗೊ ತಾವರೆ ಅರಳಿತು
ಮಳೆಯು ಸುರಿಯಿತು ಹೊಳೆಯು ಹರಿಯಿತು
ಕಣ್ಣು ಮಿಲನವ ಪಡೆಯಿತು
*****