ಚೈತ್ರ ಬಂದರೇನು?
ಚಿಗುರಿಲ್ಲವಲ್ಲ
ವಸಂತ ಬಂದರೇನು
ಹೂ ಅರಳಿಲ್ಲವಲ್ಲ.
ಯುಗಾದಿ ಬಂದರೇನು?
ಹರುಷವಿಲ್ಲವಲ್ಲ
ಕಟ್ಟಿದ ಕನಸುಗಳು
ನನಸಾಗದೆ ಬಂಧಿಯಾಗಿವೆ
ಭೂತದ ಪಂಜರದಲ್ಲಿ
ಆಸೆ ಭರವಸೆಗಳು ದಹಿಸಿವೆ
ಅಂತರಂಗದ ಅಗ್ನಿಕುಂಡದಲ್ಲಿ
ಹೃದಯ ಮನಸ್ಸುಗಳೆರಡು
ಶಿಲೆಯಾಗಿವೆ.
ಜಡಭರತ | ಸಮಾಧಿಯೊಳಗೆ
ಮುಂದೇನು? ಮುಂದೇನು?
ಭಯಾಂತಂಕದ ಬಿಳಿಲುಗಳು
ನೇತಾಡುತ್ತಿವೆ ಶವದಂತೆ
ಕಾಲವೃಕ್ಷದಲ್ಲಿ.
ಹುಟ್ಟು ಸಾವು, ನೋವು ನಲಿವು
ಬೆಲ್ಲ ಬೇವು
ತಾಕಲಾಟದ ತಕ್ಕಡಿಯಲ್ಲಿ.
ಯುಗಾದಿ ಬಂದರೇನು?
ಬಾರದಿದ್ದರೇನು?
ಬದಲಾಗದು ಸ್ವರತಾನ
ಅದೇ ರಾಗ ಅದೇ ಹಾಡು
ಬದುಕು ಬರಡು
ಬವಣೆ ಗೂಡು.
*****
Related Post
ಸಣ್ಣ ಕತೆ
-
ದೊಡ್ಡವರು
ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…
-
ಆ ರಾತ್ರಿ
ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…
-
ಕರಿ ನಾಗರಗಳು
ಚಿತ್ರ: ಆಂಬರ್ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್ ನೀರು ಹರಿಯುತ್ತಿದ್ದ… Read more…
-
ರಾಧೆಯ ಸ್ವಗತ
ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…
-
ಕಳಕೊಂಡವನು
ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…