ದೇವಿ ಯಾವಗಳಿಗೆ ನಾನು
ನಿನ್ನ ಮೊಗವ ನೋಡಲಾರೆನೇನು!
ನಿನ್ನ ಕೌದ್ರ ನೋಟದಲಿ ಜಗವು
ಸೃಷ್ಟಿ ಸ್ಥಿತಿ ಲಯದಿ ಉರುಳಿದೆ ಯುಗವು
ದೇವಿ ತಾಯೆ ಮಾತೆ, ಕಾಳಿ ನೀನು
ನಿನ್ನ ಸಾನಿಧ್ಯದಲ್ಲಿ ಬಾಳು ಜೇನು
ನಿನ್ನೊಂದು ಕೃಪೆ ನನ್ನಳತೆ ಗೋಲು
ನಡೆದರಾಯ್ತು ಬಾಳಲ್ಲಿ ಇಲ್ಲ ಸೋಲು
ಹೆಜ್ಜೆ ಹೆಜ್ಜೆಗೂ ಕಾಡಿದೆ ನಿನ್ನ ನೆನಪು
ನಿನಗಾಗಿ ನನ್ನ ಸೇವೆ ಮುಡಿಪು
ಈ ಬಾಳು ಎಷ್ಟೊತ್ತಿನ ವರೆಗೆ ತಾಯಿ
ನಿನ್ನ ದರುಶನಕ್ಕೆ ಕಾತರಿಸಿದೆ ಮಾಯಿ
ನಿನ್ನೊಂದು ದರುಶನ ನನ್ನ ಜನ್ಮ ಸಫಲ
ಅದಿಲ್ಲದೆ ಈ ಬದುಕು ವಿಫಲ
ತಾಯೆಯಲ್ಲವೇ ನೀನು ನಾನುಕಂದ
ಮಾಣಿಕ್ಯ ವಿಠಲನ ನಾಮದಿಂದ
*****