ಮಾರಣೆಯ ದಿನ ಗಂಗಾಜಿಯಿ, ಸುಭದ್ರೆ, ಮಾಧವ, ಶಂಕರ ರಾಯ, ನವಾಬ, ಈಐದುಜನನೂ ಠಾಣೆಗೆ ಹೋದರು. ಸುಭದ್ರೆಯನ್ನು ಕಂಡೊಡನೆಯೆ ಆತ್ಮಾ ರಾಮುನು ಅವಳ ಕಾಲುಗಳ ಮೇಲೆಬಿದ್ದು “ನನ್ನನ್ನು ಕ್ಷಮಿಸಿ ರುವೆನೆಂದು ಒಂದುಮಾತು ಹೇಳಿ, ತಾಯೆ! ನಾನು ನಿಮ್ಮನ್ನು ಬಹಳವಾಗಿ ಕಷ್ಟಪಡಿಸಿದೆ ಎಂದನು. ಸುಭದ್ರೆಯು ಮನಃಪೂರ್ವಕವಾಗಿ ನಿಮ್ಮನ್ನು ಕ್ಷಮಿಸಿರುವುದಲ್ಲದೆ ನಿಮಗೆ ಬಹಳ ಕೃತಜ್ಞಳಾಗಿದ್ದೇನೆ.” ಎಂದಳು. ಅದನ್ನು ಕೇಳಿ ಆತ್ಮಾ ರಾಮನು ಗಟ್ಟಿಯಾಗಿ ನಕ್ಕು, “ನಾನೇ ಧನ್ಯ, ನಾನೇ ಧನ್ಯ“ ಎಂದು ಕೂಗಿಕೊಂಡು ಸ್ಮೃತಿ ತಪ್ಪಿದವನಂತೆ ಬಿದ್ದುಕೊಂಡನು. ಠಾಣೆಯ ದರೋಗನು ಅವನ ಸಹಾಯಕ್ಕೆ ಓಡಿದನು. ಆದರೆ ಆತ್ಮಾ ರಾಮನು ಗತಾಸುವಾಗಿದ್ದನು ಕೂಡಲೆಒಬ್ಬಜವಾನನು ಆಸ್ಪ ತ್ರೆಗೆಓಡಿಹೋಗಿ ಡಾಕ್ಟ್ರರನ್ನು ಕರೆತಂದನು. ಮ್ಯಾಜಿಸ್ಟ್ರೇಟನನ್ನೂ ಅಲ್ಲಿಗೆ ಬರಮಾಡಿ ದರು; ಅವರಿಬ್ಬರೂ ನೋಡಿದರು. ಕೊಂಚ ಹೊತ್ತಿನಲ್ಲಿಯ ಶವವು ಹಸುರು ಬಣ್ಣಕ್ಕೆ ತಿರುಗಿದ್ದುದರಿಂದ ಸಂದೇಹವುಂಟಾಗಿ ಆಸ್ಪತ್ರೆಗೆ ಅದನ್ನು ತೆಗೆದುಕೊಂಡು ಹೋದರು. ಅಲ್ಲಿ ಪರೀಕ್ಷೆ ಮಾಡಲಾಗಿ ಅನ್ನ ಕೋಶದಲ್ಲಿ ವಿಷವಿತ್ತು. ಅದು ನಿಧಾನವಾಗಿ ಕೊಲ್ಲುವ ವಿಷವೆಂದು ತಿಳಿಯಬಂದಿತು. ಅತ್ಮಾ ರಾಮನು ಅದನ್ನು ಹಿಂದಿನ ರಾತ್ರೆ ನುಂಗಿರಬೇಕೆಂದು ನಿರ್ಧರಿಸಿದರು. ಅನಂತರ ಆತ್ಮಾ ರಾಮನ ಮರಣವನ್ನು “ಅತ್ಮ ಹತ್ಕೆ” ಯೆಂದು ತೀರ್ಮಾನಿಸಿ ಶವವನ್ನು ಶಂಕ ರರಾಯನ ಕೋರಿಕೆಯಂತೆ ಅವನ ವಶಕ್ಕೆ ಕೊಡಿಸಿದರು.. ಶಂಕರರಾ ಯರಿಗೆ ಆತ್ಮಾ ರಾಮನು ಪ್ರಾಣಬಿಟ್ಟುದಕ್ಕಾ [\ ಬಹಳ ವ್ಯಥೆ ಯುಂಟಾಯಿತು. ಅವನ ಅಪರಕರ್ಮಕ್ಕೆ ತಕ್ವ ಏರ್ಪಾಡು ಮಾಡಿ, ಎಲ್ಲರೂ ನಿರ್ಮಲವನ್ನು ಬಿಟ್ಟು ಪ್ರಯಾಣಮಾಡಿದರು. ಅಸ್ತತ್ರೆಯ ಮುಖ್ಯವೈದ್ಯನಿ ಗೂ ಗಂಗಾರಾನುನಿಗೂ . ಅತಿಶಯವಾದ ಬಹು ಮಾನಗಳು ದೊರಕಿದುವು. ಶಂಕರರಾಯನೂ ಅವನ ಕುಟುಂಬದ ವರೂ ಹೈದರಾಬಾದಿನಲ್ಲಿ ನವಾಬನ ಕೋರಿಕೆಯಂತೆ. ೩-೪ ದಿನಗಳು ನಿಂತು ಅವನ ಅನುಮತಿಯನ್ನು . ಪಡೆದ್ದು ಪುನಹೆಗೆ, ತಲಪಿದರು.
ಶಂಕರರಾಯನು ಒಂದುದಿನ ಏಕಾಂತವಾಗಿ . ರಾಮುರಾ ಯನನ್ನು . ರಾಂಪುರದಿಂದ ಕರೆಸಿಕೊಂಡು ಆತ್ಮಾ ರಾಮನ ಹೇಳಿಕೆಯ ನಕಲೊಂದನ್ನು ತೆಗೆದು ಕೈಯಲ್ಲಿಟ್ಟ್ರನು. ರಾಮರಾ ಯನಿಗೆ ಯಾವ ಸಂಗತಿಯೂ ಗೊತ್ತಾಗಿರಲಿಲ್ಲ ಆ ಹೇಳಿಕೆಯನ್ನು ನೋಡುತ್ತಲೇ ನಡುಗಲಾರಂಭಿಸಿ ಶಂಕರರಾಯನ ಎರಡು ಕಾಲುಗಳನ್ನೂ. ಹಿಡಿದುಕೊಂಡು “ನನ್ನ ನ್ನು ಉದ್ಧಾರಮಾಡ ಬೇಕು ಎಂದನು. ಶಂಕರರಾಯನು ಅವನ ಕೈಗಳನ್ನು ಬಿಡಿಸಿ, “ಸ್ವಾಮಿ ! ತಾವು ಹೆದರಬೇಡಿ. ನಾನು ಹಾಗೆ ತಮಗೆ ತೊಂದರೆ.. ಕೊಡಬೇಕಂದಿದ್ದರೆ ಈ ಕಾಗದವು ನ್ಯಾಯಸ್ಥಾನ ದಲ್ಲಿರುತ್ತಿತ್ತು. ಇನ್ನು ಮೇಲಾದರೂ ತಾವು ನಮ್ಮಲ್ಲಿ ಪ್ರಸನ್ನರಾಗು ವುದಾಗಿ ವಾಗ್ದಾನಮಾಡುವಿರಾ?“ ಎಂದು ಕೇಳಿದನು. ರಾಮ ರಾಯನು, “ನಾನು ತಮ್ಮ ದಾಸಾನುದಾಸನಾಗಿರುವೆನು.“ ಎಂದನು. ಶಂಕರರಾಯನು “ನಮಗೇನಾದರೂ ವಿರೋಧವಾಗಿ ನಡೆದರೆ ಗೊತ್ತೇ ಇದೆಯಷ್ಟೆ“ ಎಂದು ಹೇಳಿ ಕಳುಹಿಸಿಕೊಟ್ಟನು.
ಶಂಕರರಾಯನು ಒಂದು ಶುಭಲಗ್ನವನ್ನು ಗೊತ್ತುಮಾಡಿ ‘ಗೃಹಪ್ರವೇಶ’ ವೆಂಬ ಶಾಪ್ತವನ್ನು ನೆರವೇರಿಸಿದನು. ಅ ದಿನ ಬ್ರಾ ಹ್ಮಣರು ಮಾತ್ರವಲ್ಲದೆ ಯೂರೋಪಿಯನರು, ಮುಹವಮದೀಯರು ಮುಂತದ ಎಲ್ಲಾ ಜಾತಿಯ ಜನರಿಗೆ ಅಂತ್ಯದಾದರದಿಂದ ಔತಣವು ನಡೆಯಿತು. ೮ ದಿನದ ವಿಜೃಂಭಣೆಯು ವರ್ಣಿಸಲಸದಳ ವೆಂಬಂತಿತ್ತು. ಅದರೆ ಮಾಧವನೂ ಸುಭದ್ರೆಯೂ ಹಸೆಯಮೇಲೆ ಕುಳಿತಿದ್ದಾಗ್ಗೆ ಅವರ ಸೊಬಗನ್ನು ನೋಡುವುದರಿಂದುಂಟಾದ ತೃಪ್ತಿಗೆ ಇದಾವುದೂ ಸರಿಬರಲಿಲ್ಲ. ಗಂಗಾಬಾಯಿಯೂ ಶಂಕರ ರಾಯನೂ ಮಗನನ್ಗೂ ಸೊಸೆಯನ್ನೂ ನೋಡಿ ನೋಡಿ ಸಂತೊ ಷದಿಂದ ಹಿಗ್ಗುತಲಿದ್ಗರು.
ಸಂತೋಷದ ಮೇಲೆ ಸಂತೋಷ! ವಿಶ್ವನಾಥನೂ ರಮಾಬಾ ಯಿಯೂ ಪುನಹೆಯಹತ್ತಿರ ಯಾವುದೋ ಹಳ್ಳಿಪಳ್ಳಿಗಳಲ್ಲಿ ಭಿಕ್ಟಾ ಟನೆ ಮಾಡುತ್ತಿದ್ದವರು ಆಕಸ್ಮಿತವಾಗಿ ಪುನಹೆಗೆ ಆದಿನ ಬಂದರು. ಅಲ್ಲಿ ಶಂಕರರಾಯರ ಮನೆಯಲ್ಲಿ ದೊಡ್ಡ ಔತಣ ನಡೆಯುವುದಾಗಿ ತಿಳಿದು ಭೋಜನಕ್ಕೆ ಬಂದರು. ಭೋಜನ ನಡೆಯುವಾಗ್ಗೆ ಜನಸಂದಣಿಯಲ್ಲಿ ದ್ದುದರಿಂದ ಇವರಿರುವುದು ಯಾರಿಗೂ ಗೋಚರವಾಗಲಿಲ್ಲ. ಭೋಜ ನಾನಂತರ ಸಭೆಸೇರಿ ಹಸೆಯಮೇಲೆದಂಪತಿಗಳು ಕುಳಿತಿದ್ದಾಗ್ಗೆ, ರಮಾ ಬಾಯಿ ಎದ್ದುನಿಂತು ಸುಮ್ಮನೇ ಬೆರಗಾಗಿ ನೋಡುತ್ತಿದ್ದಳು. ಅವಳ ಆಶ್ಚರ್ಯಕ್ಕೆ ಮಿತಿಯೇ ಇರಲಿಲ್ಲ. ಹಸೆಯಮೇಲೆ ಳುಳಿತಿರುವರಾರು ? ಮಗಳು, ಅಳಿಯ. ಎಷ್ಟು ನೋಡಿದರೂ ಅವರೆಲ್ಲ ಅಷ್ಟುಹೊತ್ತಿಗೆ ಯಾವುದೋ ಕೆಲಸದ ನಿಮಿತ್ತವಾಗಿ ಗಂಗಾಬಾಯಿಯು ರಮಾ ಬಾಯಿ ನಿಂತಿದ್ದ ಕಡೆ ಬಂದು, ಅವಳನ್ನು ಕಂಡು “ಇದೇನು ರಮಾ ಬಾಯಿ! ಯಾವಾಗ ಬಂದಿರಿ ? ಇದೀಗ ಸುದಿನ!` ಎಂದುಹೇಳುತ್ತಾ ನೆಟ್ಟಗೆ ದೊಡ್ಡ ಮನುಷ್ಯರ ಹೆಂಗಸರು ಸುಳಿತಿದ್ದ ಕಡೆಗೆ ಕರೆದು ಕೊಂಡು ಹೋಗಿ ಕಳ್ಳಿ ರಿಸಿ “ಏಲ್ಲಿ ಯಜಮಾನರು ?“ ಎಂದು ಕೇಳಿದಳು. ರಮಾಬಾಯಿಯು ವಿಶ್ವನಾಥನನ್ನು ತೋರಿಸಿ ಕೊಟ್ಟಳು. ಅವನೂ ಹೆಂಡತಿಯಂತೆಯೆ ಎದ್ದುನಿಂತು ಆಶ್ತರ್ಯ ಪರವಶನಾಗಿ ನೋಡುತ್ತಿದ್ದನು. ಗಂಗಾಬಾಯಿ ಅವನನ್ನು ಮೇಲಕ್ಕೆ ಕರೆಸಿಕೊಂಡು . ಶಂಕರರಾಯನಿಗೆ ಪರಿಚಯಮಾಡಿಸಿ ದಳು. ವಿಶ್ವನಾಥನು ಆ ಸಮಯಕ್ಕೆ ಸರಿಯಾಗಿ ಬಂದುದಕ್ಕೆ ಶಂಕರರಾಯನು ಬಹಳವಾಗಿ ಸಂತೋಷಪಟ್ಟನು. ತಂದಿತಾಯಿ ಗಳನ್ನು ಕಂಡೊಡನೆಯೆ ಸುಭದ್ರೆಗುಂಟಾದ ಸಂತೋಷವೆಷ್ಟೆಂದು ಹೇಳಬೇಕಾದುದೇ ಇಲ್ಲ. ಮಾಧವಗೂ ಸ್ಪಲ್ಪಮಟ್ಟಿಗೆ ಅಪೂ ರ್ಣವಾಗಿದ್ದ ಸುಖಪರಂಪರೆಯು ಸಂಪೂರ್ಣವಾಯಿತು.
*****
ಮುಗಿಯಿತು