ಸಾಮಾನ್ಯವಾಗಿ ಬಾಳೆಹಣ್ಣಿನ ಸಿಪ್ಪೆ, ಸೀತಾಫಲದ ಸಿಪ್ಪೆಗಳನ್ನು ತೆಗೆದು ಒಳಗಿನ ತಿರುಳನ್ನು ಮಾತ್ರ ನಾವು ಉಪಯೋಗಿಸುತ್ತೇವೆ. ಆದರೆ ಈ ಸಿಪ್ಪೆಗಳು ನಿರುಯುಕ್ತವೆಂದು ಬೀಸಾಡುತ್ತೇವೆ. ನಿಜಕ್ಕೂ ಈ ಸಿಪ್ಪೆಗಳಲ್ಲಿಯೇ ಜೀವಸತ್ವ ಅಧಿಕವಾಗಿರುತ್ತದೆಂದು ಆಹಾರ ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಬಾಳೆಹಣ್ಣಿನ ಸಿಪ್ಪೆಯಲ್ಲಿ ವಿದ್ಯುತ್ ತಯಾರಿಸಿದಂತೆ ಲಿಂಬೆಹಣ್ಣಿನ ಸಿಪ್ಪೆಯಲ್ಲಿ ಸ್ವಾದಿಷ್ಟವಾದ ಪುಷ್ಟಿಕರವಾದ ತಂಬುಳಿಯನ್ನು ಮಾಡಬಹುದೆಂದು ಪೌರಶಾಸ್ತ್ರಜ್ಞರು ಪ್ರಯೋಗಮಾಡಿದ್ದಾರೆ. ಒಬ್ಬರಾದರೆ ಒಂದು ಲಿಂಬೆಹಣ್ಣಿನ ಸಿಪ್ಪೆ ೧/೨ ಚಮಚೆ ಜೀರಿಗೆ, ಅಡಿಕೆ ಗಾತ್ರದ ಬೆಲ್ಲ ಅಥವಾ ತುಪ್ಪ, ಒಂದು ಲೋಟ ಸಿಹಿಮಜ್ಜಿಗೆ ೧/೪ ತೆಂಗಿನ ಕಾಯಿ ರುಚಿಗೆ ತಕ್ಕಷ್ಟು ಉಪ್ಪು, ಒಗ್ಗರಣಿ ಸಾಮಗ್ರಿಗಳು.
ತಯಾರಿಸುವ ವಿಧಾನ : ರಸ ತೆಗೆದ ಲಿಂಬೆಹಣ್ಣಿನ ಸಿಪ್ಪೆಯನ್ನು ಸಣ್ಣದಾಗಿ ಹೆಚ್ಚಿಕೊಂಡು ಬಾಣಲೆಯನ್ನು ಒಲೆಯ ಮೇಲಿಟ್ಟು ಲಿಂಬೆಸಿಪ್ಪೆಯನ್ನು ಹಾಕಿ ತುಪ್ಪುವನ್ನು ಹಾಕಬೇಕು. ಅದನ್ನು ಮಗಚುತ್ತ ಇದ್ದು ಕಂದು ಬಣ್ಣ ಬಂದಾಗ ಜೀರಿಗೆಯಲ್ಲಿ ಒಣಮೆಣಸನ್ನು ಹಾಕಿ ಹುರಿದುಕೊಳ್ಳಬೇಕು. ನಂತರ ತೆಂಗಿನ ತುರಿಯೊಂದಿಗೆ ನಯವಾಗಿ ರುಬ್ಬಿ ತೆಗೆದು ರುಚಿಗೆ ತಕ್ಕಷ್ಟು ಉಪ್ಪು ಮತ್ತು ಮಜ್ಜಿಗೆಯನ್ನು ಹಾಕಿ ಒಗ್ಗರಣಿ ಹಾಕಬೇಕು. ಮಜ್ಜಿಗೆಯ ಬದಲು ಹುಣಸೆಹುಳಿ ಹಾಕಿ ಗಟ್ಟಿಯಾಗಿ ತೆಗೆದರೆ ಚಟ್ನಿಯೂ ಆಗುತ್ತದೆ. ತಂಬುಳಿಯೂ ಆಗುತ್ತದೆ.
ಅಜೀರ್ಣವಾದರೆ ಕೊತ್ತಂಬರಿ ರಸ ಸಿದ್ಧಿ : ಜಾಸ್ತಿ ಊಟವಾದಾಗ ಅಥವಾ ಹೊಟ್ಟೆಯೊಳಗೆ ಗ್ಯಾಸ್ ತುಂಬಿಕೊಂಡು ಹೊಟ್ಟೆ ಉಬ್ಬರಿಸಿದಂತಾದಾಗ ಇಂಗ್ಲಿಷ್ ಔಷಧಿ ಪಡೆಯುವುದಕ್ಕಿಂತ ಪಾಕಶಾಸ್ತ್ರಜ್ಞರು ಇತೀಚಿಗೆ ಒಂದು ವಿಧಾನವನು ಕಂಡು ಹಿಡಿದಿದಾರೆ. ಸಿದ್ಧ ಮಾಡಿಟ್ಟುಕೊಂಡ ಕೊತ್ತಂಬರಿ ಎಲೆಗಳ ರಸವನ್ನು ಮಜ್ಜಿಗೆಯಲ್ಲಿ ಬೆರಸಿ ಕುಡಿದರೆ ಹೊಟ್ಟೆ ತಣ್ಣಗಾಗಿ ಸಾರಾಗಲಾಗುತ್ತದೆ.
*****