ನಾ ಎತ್ತೆತ್ತ ನೋಡಲಿ ನೀ ಜಗನ್ಮಾತೆ
ನಿನ್ನ ಮಾಯೆಯೆ ಈ ಜಗತ ವ್ಯಾಪಿಸಿದೆ
ನಿನ್ನ ಮರೆತು ನಿನ್ನ ಮಾಯೆಯಲ್ಲಿ ನಾ
ಮುಳಗಿ ಮತ್ತೆ ಮಾಯೆಯೇ ಮೋಹಿಸಿದೆ
ಜನನ ಮರಣಗಳ ಸುತ್ತುವರಿಯುತ್ತ
ಕಷ್ಟ ಸುಖಗಳಿಗೆಲ್ಲ ಕೈ ಚಾಚುತ್ತ
ಬಾಳಿರುವೆ ಈ ನರಕ ಸದೃಶ್ಯ ಬಾಳಿನಲ್ಲಿ
ತೇಲಿರುವೆ ನನ್ನವರ ಮೊಹಪಾಶದಲ್ಲಿ
ಯಾವುದು ನಿತ್ಯ ಯಾವುದು ಅನಿತ್ಯ
ನನಗೊಂದು ಅರ್ಥವಾಗದೆ ತೊಳಲಿರುವೆ
ಕ್ಷಣಿಕ ಬದುಕಿನಲಿ ಅನವರತವೂನಾ
ಸುಖದ ಮರೀಚಿಕೆಗೆ ಬೆನ್ನು ಹತ್ತಿ ಬಳಲಿರುವೆ
ಕಾನನದಲಿ ನಾ ಒಂಟಿಗನಾದ ಪಶುವಿನಂತೆ
ಜಗದ ಈ ಘೋರ ಅರಣ್ಯದಲಿ ಸಿಲುಕಿರುವೆ
ನನೊಡೆಯ ನನ್ನ ದಾಮ ಕಾಣದೆನಾ
ಧನಿ ಗಗನದೆತ್ತರಕ್ಕೆ ಹರಿಸಿ ರೋಧಿಸಿರುವೆ
ಬೇಡ, ನನ್ನ ನಯನಗಳತ್ತ ಹರಿಸದಿರು
ಕಾಮ ಕಾಂಚನ ಲೋಭ ಮೋಹ ಮಾಯೆ
ಈಗ ನನ್ನೆದೆಯಲಿ ನಿನ್ನದೆ ಸ್ಮರಣಿ ಉಸಿರು
ಮಾಣಿಕ್ಯ ವಿಠಲನಾಗಿಸಿ ಎತ್ತಿಕೊ ತಾಯೆ
*****