ತುಂಟ ಪುಟ್ಟ

ಪುಟ್ಟ ಒಬ್ಬ ತುಂಟನು
ಎಂದೂ ಸುಮ್ಮನಿರನು
ತುಂಟಾಟದಲ್ಲಿ ಅವನು ಸದಾ ನಿರತನು
ಅದೊಂದು ದಿನ
ಯಾರೂ ಇಲ್ಲದ ವೇಳೆ
ಅಡಿಗೆ ಮನೆಗೆ ನುಗ್ಗಿ ಬಾಟಲಿಗೆ ಕೈ ಇಟ್ಟನು

ಬೇಸನ್ನ ಉಂಡಿ
ಅವಲಕ್ಕಿ ಹಿಡಿ
ಗಡಿ ಬಿಡಿಯಿಂದ ಮುಕ್ಕಿದನು
ಹುರಿದ ಕಡಲೆ
ಪೆಂಟಿ ಬೆಲ್ಲ
ಗಬ ಗಬ ನುಂಗಿ ತೇಗಿದನು

ಅತ್ತಿತ್ತ ನೋಡಿದ
ಬಿಸ್ಕತ್ ಡಬ್ಬಕೆ ಹಾರಿದ
ಇಳಿಸಲು ಹೋಗಿ ಬೀಳಿಸಿಬಿಟ್ಟ
ಗಾಜಿನ ಬಾಟಲಿ
ಬಿದ್ದು ನೆಲದಲಿ
ಚೂರು ಚೂರಾಗಿ ಹೋಯ್ತು

ತಾಯಿ ಭಯದಲಿ
ಬಳಿಯುತ ಇರಲು
ಕೈಗೆ ಚುಚ್ಚಲು ರಕ್ತವು ಹರಿಯಿತು
ಆದ ಗಾಯ ನೋಡಿ
ಬಜಾಯಿಸಿದ ಬಂಬ್ಡಿ
ತಾಯಿಯು ತದುಕಿ, ಕಟ್ಟಿದಳು ಪಟ್ಟಿ

ತಾಯಿಯ ಹಿತೋಪದೇಶ
ತಂದೆಯ ಬುದ್ಧಿವಾದ
ಪುಟ್ಟುನ ಮನಸಿಗೆ ನಾಟಿದವು
ಅಂದಿನಿಂದ ಪುಟ್ಟು
ತುಂಟಾಟವ ಬಿಟ್ಟು
ಆದನು ಸರಳ ಸಜ್ಜನ ಸಂಘ ಜೀವಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಾಯಿ ಭಿಕ್ಷಾ
Next post ಪ್ರಕೃತಿ ಆರಾಧಕ – ಇ. ಎಂ. ಫಾರ್‍ಸ್ಟರ್

ಸಣ್ಣ ಕತೆ

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…