ಅಂದು ಶ್ವೇತಳ ಹುಟ್ಟು ಹಬ್ಬವು
ಆದಳು ಅರಳಿದ ಗುಲಾಬಿ ಹೂವು
ಸ್ನಾನವ ಮಾಡಿಸಿ ಹೂವನು ಮುಡಿಸಿ
ಕುಂಕುಮ ಇಟ್ಟರು ನೊಸಲಲ್ಲಿ
ಅವಳ ಗೆಳತಿಯರಿಗೆಲ್ಲ ಅವಳೇ
ಸಡಗರ ಆಮಂತ್ರಣ ನೀಡಿದಳು
ನೀರೂರಿಸುವ ವಿಧ ವಿಧ ತಿಂಡಿ
ಜೋಡಿಸಿ ಇಟ್ಟಳು ತಯಾರು ಮಾಡಿ
ಬಂಧು ಮಿತ್ರ ನೆರೆ ಬಂದಿತ್ತು
ನಾನಾ ಉಡುಗೊರೆ ತಂದಿತ್ತು
ಕೊರಳಿಗೆ ಹಾಕಿ ಕೈಗೆ ತೊಡಿಸಿ
ಸಂತಸಪಟ್ಟರು ಸಿಂಗರಿಸಿ
ವಿಧ ವಿಧ ಹಾಡನು ಹೇಳಿದರು
ಅಪ್ಪ ಚಾಕನು ಅವಳಿಗೆ ಕೊಟ್ಟರು
ತಾತ ಕೇಕನು ಕೊಯ್ಯ ಎಂದನು
ಶ್ವೇತಳು ಕೊಯ್ದು ಕೇಕನ್ನು
ಎಲ್ಲರ ಬಾಯಿಗೆ ಕೇಕನು ಹಾಕಲು
ಚಪ್ಪರಿಸಿದರೆಲ್ಲರೂ ಖುಷಿಯಲ್ಲಿ
ಶ್ವೇತಳ ಹರಸುತ ಊಟವ ಮಾಡಿ
ಜನವು ಚದುರಿತು ಜೊತೆ ಜೊತೆಗೂಡಿ
*****