ತಿಂಡಿಯ ಹಾಡು

ಉಪ್ಪಿಟ್ಟೆಂದರೆ ಉಪ್ಪಿಟ್ಟು
ತಿನ್ನೋದಂದ್ರೆ ತಲೆಚಿಟ್ಟು
ಕೇಸರಿಬಾತು ವಾಂಗಿಬಾತು
ಘಮಘಮ ವಾಸನೆ ಬಂತು

ಚಪಾತಿ ಚಿರೋಟಿ ಮಾಡಿದ್ರೆ
ಚಪ್ಪಾಳೆ ತಟ್ಟಿ ತಿಂತೀವಿ
ಗಸಗಸೆ ಪಾಯಸ ಮಾಡಿದ್ರೆ
ಸೊರ್ ಸೊರ್ ಅ೦ತ ಹೀರ್ತೀವಿ

ಚಕ್ಕುಲಿ ಉಂಡೆ ಮಾಡಿಟ್ಟಿದ್ರೆ
ಕದ್ದು ಕದ್ದು ಮುಕ್ತಿವಿ
ಅಕ್ಕಗೆ ಅಣ್ಣಗೆ ಗೊತ್ತಾಗ್ದಾ ಹಾಗೆ
ನಾವೇ ಎಲ್ಲ ಮುಗಿಸ್ತೀವಿ

ಅಮ್ಮ ಬಂದು ಹುಡುಕಿದರೆ
ಸುಮ್ಮನಾಗಿ ಬಿಡ್ತೀವಿ
ಗುಮ್ಮಗೆ ಹೇಳ್ತಿನಿ ನೋಡು ಅಂದ್ರೆ
ಸಾರಿ ಅಮ್ಮ ಅಂತೀವಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಾಲ್ಯದ ಆ ದಿನಗಳು
Next post ಶ್ವೇತಳ ಹುಟ್ಟು ಹಬ್ಬ

ಸಣ್ಣ ಕತೆ

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…