ಬಹಳಷ್ಟು ಜನ ಮೂತ್ರಕೋಶದ ಮತ್ತು ಕಂಡದ ಕ್ಯಾನ್ಯರಿಗೆ ತುತ್ತಾಗಿ ಬಳಲುತ್ತಿರುವುದನ್ನು ಕಾಣುತ್ತೇವೆ. ಇಂಥವರಿಗೆ ರಾಮಬಾಣವೆಂದರೆ ದಿನನಿತ್ಯದ ಆಹಾರದಲ್ಲಿ ಕಾಲಿಪ್ಲವರ್ ಮತ್ತು ಕ್ಯಾಬೇಜ್‌ಗಳನ್ನು ಹೆಚ್ಚಾಗಿ ಉಪಯೋಗಿಸಿದರೆ ಈ ಕಾಯಿಲೆಯಿಂದ ಗುಣವಾಗ ಬಹುದು ಎಂದು ಬರ್‍ಕ್ಲೆಯ, ಕ್ಯಾಲಿಪೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕರು ಅಭಿಪ್ರಾಯಪಡುತ್ತಾರೆ.
ಕಾಲಿಪ್ಲವರ್ ಮತ್ತು ಕ್ಯಾಬೆಜ್‌ಗಳಲ್ಲಿ ಇಂಡೋಲ್ (ಇಂಡೋಲ್-೩ ಕಾರ್ಬಿನೊಲ್) ಎಂಬ ರಾಸಾಯನಿಕವಿರುತ್ತದೆ. ಈ ರಾಸಾಯನಿಕಗಳು ಮಾನವನ ದೇಹದಲ್ಲಿ ಕ್ಯಾನ್ಸರ್ ಜೀವಕೋಶಗಳ ಬೆಳವಣಿಗೆಯನ್ನು ತಡೆಗಟ್ಟುತ್ತವೆ. ಈ ತರಕಾರಿಗಳನ್ನು ಸೇವಿಸಿದಾಗ ಅದರಲ್ಲಿರುವ ಇಂಡೋಲ್ ರಾಸಾಯನಿಕವು ದೇಹದಲ್ಲಿಡಿ ಇಂಡೋ ಲಿಮಿಥೇನ್ ಆಗಿ (DIM) ಪರಿವರ್ತನೆಗೊಳ್ಳುತ್ತದೆ. ಅನಂತರ ಅದು ಕ್ಯಾನ್ಸರ್ ಜೀವಕೋಶದ ಬೆಳವಣಿಗೆ ವಿರುದ್ದ ಆಕ್ರಮಣ ಆರಂಭಿಸುತ್ತದೆ. ದೇಹದಲ್ಲಿ ಆಂಡ್ರೋಜನ್ ಎಂಬ ಹಾರ್ಮೋನಿನ ಶ್ರಾವ ಅಧಿಕವಾಗಿ ಅದರ ಚಟುವಟಿಕೆ ತೀವ್ರವಾದರೆ ಅದು ಮೂತ್ರಕೋಶದ ಕಂಠದ ಗ್ರಂಥಿಯ ಕ್ಯಾನ್ಸರ್ ಜೀವಕೋಶಗಳ ಬೆಳವಣಿಗೆಗೆ ನೆರವಾಗುತ್ತದೆ. ಕಾಲಿಪ್ಲವರ್ ಮತ್ತು ಕ್ಯಾಬೆಜ್ ದಲ್ಲಿರುವ ರಾಸಾಯನಿಕ ಡಿ ಇಂಡೋಲಿಮಿಥೆನ್ ಆಂಡ್ರೋಜೆನನ ಚಟುವಟಿಕೆಯನ್ನು ಪ್ರತಿಬಂಧಿಸುತ್ತದೆ. ಡಿ ಇಂಡೋಲಿಥೇನ್ ರಾಸಾಯನಿಕದ ಆಕ್ರಮಣ ಕ್ಯಾನ್ಸರ್ ಜೀವಕೋಶಗಳ ಬೆಳವಣಿಗೆಯನ್ನು ಶೇ. ೭೦ ರಷ್ಟು ಕಡಿಮೆ ಮಾಡುತ್ತದೆ. ಎಂದು ಬಯಾಲಾಜಿಕಲ್‌ಕೆಮಿಸ್ಟ್ರಿ ಪತ್ರಿಕೆಯ ಈಚಿನ ಸಂಚಿಕೆಯೊಂದರಲ್ಲಿ ಪ್ರಕಟವಾಗಿದೆ. ಇಂಡೋಲ್ ರಾಸಾಯನಿಕವು ಹೃದಯಾಘಾತವನ್ನು ತಡೆಗಟ್ಟಲು ನೆರವಾಗುತ್ತದೆ ಎಂದು ಇದೇ ಸಂಶೋಧಕರು ಹೇಳುತ್ತಾರೆ.
*****