ನಾವೆಲ್ಲರೂ ಹಿಂದು
ಅವರ ದೃಷ್ಟಿಗೆ
ಒಳಗೆ ಅಲ್ಲ ಒಂದು
ನಮ್ಮ ದೃಷ್ಟಿಗೆ ||
ಅವನು ಗುಡಿಯ ಒಳಗೆ
ಅವನ ಹೆಸರು ಹಿಂದು
ನಾನು ಗುಡಿಯ ಹೊರಗೆ
ನನಗೂ ಹೆಸರು ಹಿಂದು
ಅವನು ಊರ ಒಳಗೆ
ನಾನು ಇರುವೆ ಹೊರಗೆ
ಹೇಳಬೇಕು ಸುಳ್ಳು
ತಾಯಿ ಒಂದೆ ಎಂದು
ಊರಿಗೊಂದೆ ಬಾವಿ
ನೀರಿಗಡ್ಡಿ ಇಲ್ಲ
ಒಂದು ಕೊಡಕೆ ಹಗ್ಗ
ಇನ್ನೊಂದು ಕೊಡಕೆ ಇಲ್ಲ
ನಿನ್ನೆವರೆಗು ನಾನು
ಏಕೊ ಅಲ್ಲ ಹಿಂದು
ಇಂದು ಏನು ಮರ್‍ಮ
ಎಲ್ಲ ಹಿಂದು-ಮುಂದು!
*****