ಕತ್ತಲೆ ಬೇಕು ಕತ್ತಲೆ ಬೇಕು
ಜಗವಽ ಕಾಣಲು
ಜೊತೆಗೆ ಕೊಂಚ ಎಣ್ಣೆ ಬೇಕು
ತತ್ವ ಬೆಳೆಗಲು
ನಾನು ಯಾರು ನೀನು ಯಾರು
ಹುಟ್ಟುವ ಮೊದಲು ನಂತರವು
ನಡುವೆ ಯಾಕೆ ಹೇಳು ಗುರುವೆ
ನೂರು ಥರ ಒಯ್ಯಾರವು
ನನಗೆ ಹೊಟ್ಟೆ ಒಂದು ಗೇಣು
ನಿನಗೂ ಅಷ್ಟೇ ಕೇಳು
ನನಗೆ ಮಾತ್ರ ಸಾವಿರ ಎಕರೆ
ಕಳ್ಳರು ಯಾರು ಹೇಳು?
ಎಲ್ಲಾ ಕಂಡೆವು ಎಲ್ಲಾ ಉಂಡೆವು
ಎಲ್ಲರಿಗೂ ಮುಂದಾಗಿ
ಆದರೂ ಯಾಕೊ ಕಲಿಯಲೆ ಇಲ್ಲ
ಬಾಳುವುದು ಚೆಂದಾಗಿ
ತತ್ವ ಬೇಕು ಕೇಳಿದೆವದನೂ
ಬದುಕಾಗಿಲ್ಲ ಹಸನು
ಮಂತ್ರಕ್ಕೆ ಉದುರುವುದೇ ಮಾವು
ತಿಳಿಯಬೇಕಿದೆ ಇನ್ನು
*****