ಕಾಣುವ ಕಣ್ಣಿಗೆ

ಕಾಣುವ ಕಣ್ಣಿಗೆ ಇರುವಳು ರುಕ್ಮಿಣಿ
ಕೃಷ್ಣನ ಬದಿಯಲ್ಲಿ;
ರಾಧೆಯು ಎದೆಯಲ್ಲಿ.
ಬಲ್ಲವರಾರು ಇರುವವರೆಂದು
ರುಕ್ಮಿಣಿ ಎದೆಯಲ್ಲಿ;
ಕೃಷ್ಣನ ಗಾಳಿಯಲಿ! ||

ತುಟಿಯಲಿ ರಾಮ ಮನದಲಿ ಕೃಷ್ಣ
ಇದು ಗಂಡಿಗೆ ಪ್ರೀತಿ;
ನಾವೊಪ್ಪಿದ ರೀತಿ.
ನುಡಿಯದೆ ಹೋದ ಮಾತುಗಳಿರವೆ?
ಹೆಣ್ಣಿನ ಮೌನದಲಿ;
ಅರಿಯದ ಭಾಷೆಯಲಿ.

ಹೆಣ್ಣಿಗೆ ಸಂಸ್ಕ ತಿ ಗಂಡಿಗೆ ಪ್ರಕೃತಿ
ಇದು ಚರಿತೆಗೆ ಶೋಭೆ;
ಕಳೆಯಲು ಪುರುಷನ ಕ್ಷೋಭೆ.
ಆದರೂ ನಡೆಯುವ ಒಳ ಸಮರದಲಿ
ಜಯವು ಸಂಸ್ಕ ತಿಗೋ?
ಇಲ್ಲಾ ಪ್ರಕೃತಿಗೋ??
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಏನಂತಿ
Next post ಬಯಸದೆ ಬರುವುದು

ಸಣ್ಣ ಕತೆ

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…