ಅಣ್ಣ ಎನ್ನ ಬಸವಣ್ಣ

ಅಣ್ಣ ಎನ್ನ ಬಸವಣ್ಣ
ಕಲ್ಯಾಣ ಬಸವಣ್ಣ|
ಕ್ರಾಂತಿಯೋಗಿ ಬಸವಣ್ಣ||

ಕಾಯಕಯೋಗಿ ಬಸವಣ್ಣ
ಕರ್ಮಯೋಗಿ ಬಸವಣ್ಣ|
ಕರುಣಾಳು ಬಸವಣ್ಣ
ಅಂತರಂಗ ಬಹಿರಂಗಶುದ್ಧಿ ಬಸವಣ್ಣ
ನಮ್ಮಯ ಆತ್ಮೋದ್ಧಾರಿ ಬಸವಣ್ಣ||

ತನುವ ದೇಗುಲ ಮಾಡಿ
ಶಿರವ ಹೊನ್ನ ಕಳಸವಮಾಡಿ
ಆತ್ಮಲಿಂಗವ ಕೈಯಲಿ ನೀಡಿ
ಆಚರಿಸಿ ತೋರಿದ ಬಸವಣ್ಣ|
ಶಿವಭಕ್ತ ಜಂಗಮರಲೇ
ಈಶನನು ಕಂಡ ಬಸವಣ್ಣ||

ಸರ್‍ವರಿಗೂ ಲೇಸನೇ
ಬಯಸಿ ತಾ ಬೆಸದಿಹ ಬಸವಣ್ಣ|
ಭಕ್ತಿ ಭಂಡಾರಿ ಬಸವಣ್ಣ
ಕೈಲಾಸದ ನಂದಿ ಈತ ಬಸವಣ್ಣ|
ಸರ್ವಜನ ಉದ್ಧಾರಕೆ ಅವತರಿಸಿದ
ಅವತಾರ ಪುರುಷನಿತನೇ
ಕೂಡಲಸಂಗಮ ಬಸವಣ್ಣ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೊಟ್ಮೊದಲು
Next post ಹಣದ ಕುಣಿತ

ಸಣ್ಣ ಕತೆ

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…