ಕುಣಿ ಕುಣಿ ಹಣವೇ ಝಣಝಣಾ!
ಮಾಡುವೆ ಹಬ್ಬಾ ದಿನಾದಿನಾ!
ಘಿಲ್ ಘಿಲ್ ಥಕ್‌ಥಕ್ ಥೈ!…..
ಬಿಲ್ಲಿಗೆ ಮೂರೇ ಪೈ!
ರಾಣಿಯ ಕಾಲಿಗೆ ಪಿಲ್ಲಿ….
ಆಣೆಗೆ ನಾಲುಕು ಬಿಲ್ಲಿ !
ನವಿಲಿನ ಕುಣಿತವು ಕಾಣೇ….
ಚವಲಿಗೆ ಎರಡೇ ಆಣೆ !
ಭಾವ ಬಂದರೆ ಗವಲಿ….
ಪಾವಲಿಗೆರಡು ಚವಲಿ !
ಕುಂಟನ ಕಿವಿಗೆ ಬಾವ್ಲಿ ….
ಎಂಟಾಣೆಗೆರಡು ಪಾವ್ಲಿ !
ಸಿಪಾಯಿ ಕತ್ತಿಗೆ ಸಾಣೆ….
ರುಪಾಯಿಗೆರಡೆಂಟಾಣೆ !
ರುಪಾಯಿಯಿದ್ದರೆ ಹೊಟ್ಟೆ…
ರುಪಾಯಿಯಿದ್ದರೆ ಬಟ್ಟೆ!
ರುಪಾಯಿಯಿಂದಲೆ ಆಟ….
ರುಪಾಯಿಯಿಂದಲೆ ನೋಟ !
ಕುಣಿದರೆ ಹಣವು ಝಣಝಣಾ !
ಮನೆಯಲಿ ಹಬ್ಬವು ದಿನಾದಿನಾ !
*****