ನಾನು, ನನ್ನ ಇರುವಿಕೆಗೆ
ನನ್ನ ದಿನದ ಭತ್ಯಕ್ಕೆ
ನ್ಯಾಯ ಒದಗಿಸುತಿರುವೆನೇ?||
ಇಷ್ಟೆಲ್ಲಾ ಗಾಳಿ ನೀರು ಭೂಮಿ
ಬೆಳಕನು ಉಚಿತವಾಗಿ
ಪಡೆಯುತ್ತಿರುವಾಗ||
ಹೆತ್ತತಂದೆ ತಾಯಿಯರ
ಕರ್‍ತವ್ಯ ಮಾಡುತಿರುವೆನೇ? |
ನನ್ನ ಬೆಳೆಸಿದ ಗುರುಹಿರಿಯರು
ಈ ಸಮಾಜದ ಋಣವ ತೀರಿಸಿದೆನೇ?|
ಸೋದರ ಸೋದರೀಯರ
ಬಂಧು ಬಾಂಧವರಿಗೆ ನೆರವಾದೆನೇ?||
ಏಕೆ ಹೀಗೆ ಯೋಚಿಸುವುದಿಲ್ಲಾ?
ಬರಿ ನಾನು, ನನ್ನ ಹೆಂಡತಿ
ಮಕ್ಕಳು ಸಂಸಾರವೆಂಬ
ಸಂಕುಚಿತ ಬುದ್ಧಿ?
ನೀನೊಬ್ಬನೇ ಈ ಸ್ಥಿತಿಗೆ
ಬರಲು ಸಾಧ್ಯವಿತ್ತೇ,
ನಾಯ್ಯತನದಲ್ಲಿ ಯೋಚಿಸು?||
ನೀ ಇಲ್ಲಿಗೆ ಬಂದು, ಇಲ್ಲಿ
ಏನೆಲ್ಲಾ ಪ್ರಯೋಜನ ಪಡೆದು
ನೀನೋಬ್ಬನೇ ಬರೀ ಸ್ವಾರ್‍ಥದಲಿ
ಬದುಕುವುದಾದರೆ ನಿನ್ನಿಂದ
ಈ ಪ್ರಕೃತಿಗೇನು ಪ್ರಯೋಜನ?|
ನಿನ್ನ ತರುವಾಯ ಈ ನಿನ್ನ ಮೋಹ
ಸಂಸಾರವನು ಸಾಕುವರಾರು?|
ಬಿಡು ಬರೀ ಹಣಕೂಡಿಡುವುದನು
ವಂಶದ ಉದ್ದಾರಕೆ ಕೊಂಚ
ಪುಣ್ಯಗಳಿಸುವ ಕಾರ್‍ಯಗಳಮಾಡು||
*****