ಅಮ್ಮಾ ಎಂದು ಯಾರನು?

ಅಮ್ಮ ಎಂದು ಯಾರನು ಕೂಗಲಿ?
ಅಮ್ಮ ಎಂದು ಯಾರ ತಬ್ಬಿಕೊಳಲಿ|
ನಿನ್ನ ಪ್ರೀತಿ ಮಮತೆ ಸಿಗದೀಜಗದಿ
ನಾನಾದೆನಿಂದು ತಬ್ಬಲಿ||

ಅಮ್ಮಾ ನನ್ನ ಆಸೆಗಳನ್ನೆಲ್ಲಾ
ಯಾರಬಳಿ ಹೇಳಲಿ
ಅಮ್ಮ ನನ್ನ ಬೇಕು ಬೇಡಗಳ
ಹೇಗೆ ತಾನೆ ತಿಳಿಯಲಿ|
ಅಮ್ಮಾ ನನ್ನ ಸರಿ ತಪ್ಪುಗಳ
ಹೇಗೆ ಸರಿಪಡಿಸಲಿ|
ಅಮ್ಮಾ ನಾ ಹೆದರಿದಾಗ
ಯಾರನು ತಬ್ಬಿ ಮಲಗಲಿ||

ಅಮ್ಮಾ ನನಗೊಂದು ವೇಳೆ
ಸಂತೋಷವೇನಾದರೂ ಆದರೆ
ಯಾರ ಬಳಿ ಹೇಳಲಿ|
ಅಮ್ಮಾ ನಿನ್ನ ಪ್ರೀತಿ ನೆನೆದು
ಅಳು ಬಂದೊಡನೆ
ಯಾರ ಬಳಿ ಓಡಲಿ||

ಅಮ್ಮ ನಿನ್ನ ಪ್ರೀತಿಗೆ ಸಮವುಂಟೇ ಈಜಗದಿ|
ಹೆತ್ತ ಕರುಳ ಮಮತೆ ಸಿಗುವುದುಂಟೆ?
ನಾನು ಮರೀಚಿಕೆ ನೆಚ್ಚಿ ಓಡುತಿರುವೆ
ಅದು ನನಗೆ ಈ ಜನ್ಮದಲಿ ಸಿಗುವುದೆ ?
ದೇವಾ ನನ್ನ ಯಾವ ತಪ್ಪಿಗೆ ಈ ಶಿಕ್ಷೆ
ನನ್ನಂತವರಿಗೆ ಇರಲಿ ನಿನ್ನಯಾ ಶ್ರೀರಕ್ಷೆ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅರಿವು
Next post ಶಬರಿಯ ಬಾಳು

ಸಣ್ಣ ಕತೆ

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…