ಆಡಿಸು ನನ್ನ ಜಾಡಿಸು ನನ್ನ

ಆಡಿಸು ನನ್ನ ಜಾಡಿಸು ನನ್ನ
ಒದ್ದಾಡಿಸು ನೀ ನನ್ನ
ಜಾಲಾಡಿಸು ಕೊಳಕನ್ನ
ಓ ಜಲಗಾರ

ಬೇಯಿಸು ನನ್ನ ಕಾಯಿಸು ನನ್ನ
ಕುದಿಯಿಸು ನೀ ನನ್ನ
ಬೇರಾಗಿಸು ಎಲ್ಲಾ ಕಶ್ಮಲವನ್ನ
ಓ ಮಡಿವಾಳ

ಒಣಗಿಸು ನನ್ನ ಒಡೆಯಿಸು ನನ್ನ
ಉರಿಯಿಸು ನೀ ನನ್ನ
ತೆಗೆ ನನ್ನಿಂದಲು ತುಸು ಬೆಳಕನ್ನ
ಓ ದೀಪಗಾರ

ಕುಟ್ಟಿಸು ನನ್ನ ಕರಗಿಸು ನನ್ನ
ಆರಿಸು ನೀ ನನ್ನ
ಹೊಳೆಯಲಿ ಏನಾದರು ಇದ್ದರೆ ಚೆನ್ನ
ಓ ಸೋನಗಾರ

ತಿರುಗಿಸು ನನ್ನ ಮುರುಗಿಸು ನನ್ನ
ಹದವಾಗಿಸು ನೀ ನನ್ನ
ಹಾಡಿಸು ನನ್ನಿಂದಲು ಏನಾದರು ಗಾನ
ಓ ಸಂಗೀತಗಾರ

ಪಳಗಿಸು ನನ್ನ ಬೆಳಗಿಸು ನನ್ನ
ತೊಳಗಿಸು ನೀ ನನ್ನ
ಸಾಧಿಸು ನನ್ನಿಂದಲು ಏನಾದರು ನಿಜವನ್ನ
ಓ ಋಜುಗಾರ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೧೮
Next post ಪಂಪನ ಒರತೆ

ಸಣ್ಣ ಕತೆ

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಸಂಬಂಧ

    ದೆಹಲಿಯಲ್ಲಿ ವಿಪರೀತ ಚಳಿ. ಆ ದಿನ ವಿಪರೀತ ಮಂಜು ಕೂಡಾ ಕವಿದಿತ್ತು. ದೆಹಲಿಗೆ ಬರುವ ವಿಮಾನಗಳೆಲ್ಲಾ ತಡವಾಗಿ ಬರುತ್ತಿದ್ದವು. ಸರಿಯಾಗಿ ಲ್ಯಾಂಡಿಂಗ್ ಮಾಡಲಾಗದೆ ಫೈಲೆಟ್‌ಗಳು ಒದ್ದಾಡುತ್ತಿದ್ದರು. ದೆಹಲಿಯಿಂದ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…