ನಗೆಯು ಬಂದು

ನಗೆಯು ಬಂದು
ತುಟಿಯ ಮೇಲೆ ನಿಂತಿದೇತಕೆ|
ನಸುನಗುತಲಿ ಮೊಗ್ಗಾಗಿ
ಮಿಂಚುತಿದೇಕೆ?
ಹೊರಹೊಮ್ಮಲಿ ನಗೆ ಚಿಮ್ಮಲಿ
ಹರ್ಷದಾನಂದ ಮಳೆಸುರಿಯಲಿ||

ಏನೋ ಒಳಗೆ ಸಂತಸದ
ಹೊನಲು ಚಿಗುರೊಡೆದಂತಿದೆ|
ಹೇಳಲಾರದ ಹೊಸ
ಅನುಭವವ ಅನುಭವಿಸುತಲಿ|
ತನಗರಿವಿಲ್ಲದಲೆ ತುದಿಬೆರಳನು ಕಚ್ಚಿ
ಮತ್ತೆ ಮತ್ತೆ ನೆನೆದು
ಅದನೇ ಸವಿದು ಮುಗುಳ್ನಗುತಿದೆ||

ಇದು ಪ್ರೀತಿಯ ಜಳಕವೊ
ಪ್ರೇಮದ ಪುಳಕವೊ|
ಹದಿಹರೆಯದ ತುಡಿತವೋ
ಮೋಹ ಪರವಷತೆಯ ಮಾಯೆಯೋ|
ಅರಿಯಲಾಗದ ಒಲವ ಸೆಲೆಯೋ
ಅಂತರಂಗದ ಸ್ಫೂರ್ತಿ ಚಿಲುಮೆಯೋ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೇವರ ಕುಂಕುಮ
Next post ಹರಿಯೆ ನನ್ನ ಅರಿಯೆ

ಸಣ್ಣ ಕತೆ

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…