ಓ ಎನ್ನ ಎದೆಯಾಳದ ಹರಿಯೆ
ನೀನು ನನ್ನ ಭಾವಗಳ ಅರಿಯೆ
ನಾನು ಹೇಗಿದ್ದರೂ ಅದು ಸರಿಯೆ
ನಿನ್ನ ನೆನಪಲ್ಲೆ ಎಲ್ಲವೂ ಮರೆವೆ
ಯಾವುದು ಇಲ್ಲಿ ಸಾರ್ಥಕವಿಲ್ಲ
ಎಲ್ಲ ಕಾಲ ಗರ್ಭನಲ್ಲಿ ಕಳೆಯುತ್ತದೆ
ಕ್ಷಣ ಕ್ಷಣಕ್ಕೂ ತನ್ನನ್ನೆ ಕಳೆದುಕೊಂಡು
ಸಾವಿನ ಮಡಿಲಲ್ಲಿ ಸೇರಿ ಅಳಿಯುತ್ತದೆ
ಭವದ ಭೂಮಿಯಲ್ಲಿ ಆಸೆ ಮನೆ ಮಾಡಿ
ಆ ಆಸೆಗೆ ನೂರೆಂಟು ಬಿಟ್ಟಿವೆ ಬೇರು
ಯಾವ ಚರಣದಲ್ಲೂ ನಿರಾಶೆ ನೀಡಿ
ಸರಿಯುತ್ತವೆ ಆಗ ತಬ್ಬಲಿಮನ ಆಖೇರು
ಇನ್ನೂ ವಿಳಂಬವೇಕೆ ಏ ಮಾನವ
ಈಗಲೇ ರೂಪಿಸು ನಿನ್ನ ಈ ಬದುಕು
ಮೋಜು ಗೋಜುಗಳಲಿ ಕಳೆಯದಿರು ಜೋಕೆ
ಮಾಣಿಕ್ಯ ವಿಠಲನಾಗಿ ಬೇಡು ಬೆಳಕು
*****