ಕೂಲಿಕೆಲಸ ನಮ್ಮದು

ಕೂಲಿಕೆಲಸ ನಮ್ಮದು
ದಿನದ ಕೂಲಿಕೆಲಸ ನಮ್ಮದು|
ಅಂದಿನದ ಕೂಲಿ ಅಂದೇ ಪಡೆವ
ನಾಳಿನ ಕೆಲಸದ ಖಾತ್ರಿಯೇ ಇಲ್ಲ||

ದಿನದ ಕರ್ಮಕೆ ಪ್ರತಿಫಲವ
ಅಂದೇ ಕೊಡುವಕಾಲ|
ಹಿಂದಿನಂತೆ ಮುಂದಿನ ಜನ್ಮಕೆ
ವರ್ಗಾವಣೆಯೆಂಬುದೇ ಇಲ್ಲ|
ಪುಣ್ಯವಿದ್ದರೇನೇ ನಾಳೆಯ
ಕೆಲಸ ನೀ ಪಡೆಯುವೆ
ಇಲ್ಲದಿರೆ ಇಂದೇ
ಕಂತೆ ಒಗೆದು ಸಂತೆಮುಗಿಸಿ
ಇಹದ ಪ್ರಯಾಣ ಮುಗಿಸುವೆ||

ಕೋಟಿ ಇರಲಿ ಆಸ್ತಿ
ನಿನ್ನದಲ್ಲ ನಾಳೆಗೆ|
ಭೀತಿ ಇರಲಿ ನಿನಗೆ
ನಾಳೆಯ ಪಾಳಿಗೆ|
ಭಯವಿರಲಿ ಧರ್ಮದ
ಮಾನದಂಡ ಚಾಟಿಗೆ|
ನೀತಿ ನಿಯಮವಿರಲಿ
ನಿನ್ನ ದುಡಿಮೆಗೆ||

ಎಷ್ಟು ಗಳಿಸಿ ಕೂಡಿಟ್ಟರೇನು
ಹೆತ್ತಮಕ್ಕಳು ಕಡೆಗಣಿಸೆ ಮುಪ್ಪಿನಲಿ
ನೊಂದು ಮನಮಿಡಿಯೆ
ಯಾರಿರುವರು ನಿನ್ನೊಟ್ಟಿಗೆ|
ಸತ್ತಾಗ ಬಂಧು-ಸಂಸಾರ
ಬರುವುದೇ ನಿನ್ನೊಂದಿಗೆ
ಧರ್ಮ, ಪುಣ್ಯಕರ್ಮ ಫಲಗಳೆರಡೇ
ಉಳಿವವು ನಿನ್ನ ಜೊತೆಗೆ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೌನ
Next post ಹರಿ ನಿನ್ನ ನೋಡದೆ…

ಸಣ್ಣ ಕತೆ

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…