ಹರಿ ನಿನ್ನ ನೋಡದೆ ನಾನು
ಏನು ನೋಡಿದರೆ ಭಾಗ್ಯ
ಚಣ ಚಣವು ಜನನಿಂದೆಗಳಲಿ
ಬೆಂದು ಬಳಲಿದೆ ನಾ ನಿರ್ಭಾಗ್ಯ
ತೋರುವುದಕ್ಕೆ ನುಡಿಸಿದವರು
ಒಳಗೆ ಕಪಟ ಮತ್ತೆ ಸಂಚು
ನಂಬಿ ನಂಬಿ ಬಾಳಿದರೆ
ಒಳಗೆಲ್ಲ ನಡೆದಿದೆ ಒಳಸಂಚು
ಈಗೊಮ್ಮೆ ನಾ ನಿತ್ಯ ಕೊರಗುವೆ
ನಾನೇಕೆ ಅಂದು ಸನ್ಯಾಸಿಯಾಗದಾದೆ
ಯಾವ ಜನುಮದ ಪಾಪ ಮುತ್ತಿ
ಎನಗೆ ಭವದ ರೋಗಿ ಮಾಡಿದೆ
ಜನಿಸುತ್ತಲೆ ದೇವರುಡಿಗೆ ಬೀಳುವವರು
ಭಾಗ್ಯವಂತರು ಅವರು ಭಾಗ್ಯವಂತರು
ಅವರಂಥ ಬಾಳು ಲಭಿಸದೆ ಎನಗೆ
ಮಾಣಿಕ್ಯ ವಿಠಲನಿಗೆ ನೀನೆ ಕಲ್ಪತರು
*****