ಕಟ್ಟುವೆವು ನಾವು

ಕಟ್ಟುವೆವು ನಾವು
ಕನ್ನಡ ನಾಡೊಂದನು
ಶಾಂತಿಯ ಬೀಡೊಂದನು||
ಉಳಿಸಿ ಬೆಳೆಸುವೆವು ನಾವು
ಕನ್ನಡ ಸುಸಂಸ್ಕೃತಿಯ
ಕನ್ನಡ ನಾಡೊಂದನು||

ಏನೇ ಬರಲಿ ಎಂತೇ ಇರಲಿ
ಕನ್ನಡ ನಮ್ಮಯ ಉಸಿರಾಗಲಿ|
ಕನ್ನಡಕಾದರೆ ಏನೇ ತೊಂದರೆ
ಒಗ್ಗಟ್ಟಲಿ ಮೊಳಗಲಿ ಕನ್ನಡಕಹಳೆ|
ಕನ್ನಡ ಡಿಂಡಿಮ ಬಾರಿಸುವುದೊಂದೇ
ನಮ್ಮಯ ಗುರಿಯಾಗಲಿ ಮುಂದೆ||

ಸಿಗದಿರೆ ನ್ಯಾಯ ಕನ್ನಡಿಗರಿಗೆ
ಹೋರಾಡುವೆವು ಜಯ ಸಿಗುವವರೆಗೆ|
ಒಂದೇ ಕರುನಾಡು, ಒಂದೇ ಕನ್ನಡಧ್ವಜ
ನಾಡು ಇಬ್ಬಾಗವಾಗೆ ಬಿಡೆವು ರಾಜಕೀಯ ಪಕ್ಷದಂತೆ|
ಕುತಂತ್ರಿಗಳಿಗಿಲ್ಲಿ ಇಲ್ಲ ಆಸ್ಪದ
ಒಗ್ಗಟ್ಟಲ್ಲಿದೆ ಶಕ್ತಿ, ಒಮ್ಮತದಲ್ಲಿದೆ ಯುಕ್ತಿ
ಒಂದೇ ಭಾಷೆ, ಒಂದೇ ಕರ್ನಾಟಕ ದೇಶ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸ್ವಾರ್ಥ
Next post ಬದುಕಾಗಲಿ ಬೆಳಕು

ಸಣ್ಣ ಕತೆ

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…