ಅಮ್ಮನ ತೊರೆದು ನಾವೆಲ್ಲ
ಬದುಕುವ ಶಕ್ತಿ ನಮಗಿಲ್ಲ
ಅವಳ ಉಸಿರಲಿ ಉಸಿರಾಗಿ
ಬಾಳು ಬದುಕುವೆವು ನಾವೆಲ್ಲ ||
ಅಮ್ಮನ ರೀತಿಯೆ ಆ ಸಿಂಧು
ಗಂಗೆ ಯಮುನೆ ಕಾವೇರಿ ತುಂಗೆ ಭದ್ರೆ
ನಮ್ಮಯ ಬಾಳಿಗೆ ಆಧಾರವು
ನಮ್ಮನ್ನು ಸಲಹುವ ತಾಯಿಯರು ||
ಜಾತಿ ಭೇದಗಳು ನಮಗಿಲ್ಲ
ಅಮ್ಮನ ಮಡಿಲ ಹೂವುಗಳು
ಕನ್ನಡ ತಾಯಿಯ ಕುಲಜರು
ಒಂದೇ ತಾಯಿ ಮಕ್ಕಳು ||
ಸತ್ಯ ಧರ್ಮಗಳೆ ನಿತ್ಯ ಕರ್ಮ
ನೀತಿ ನ್ಯಾಯಗಳೇ ನಮದೆಲ್ಲ
ನಿಸ್ವಾರ್ಥದ ಹಣತೆಯ ಹಚ್ಚಿ
ಐಕ್ಯತೆಯಿಂದಲಿ ಬಾಳುವೆವು ||
ಭಾರತಾಂಬೆಯ ಮುದ್ದಿನ ಮಗಳು
ಕನ್ನಡ ತಾಯಿಯು ನಮ್ಮಮ್ಮ
ಕೆಚ್ಚಿನ ಕಲಿಗಳು ವೀರಯೋಧರು
ನಮ್ಮಯ ಶಕ್ತಿಗೆ ಎದುರಾರಿಲ್ಲ ||
ಕನ್ನಡ ತಾಯಿಯ ಮಕ್ಕಳು ನಾವು
ಸಾಹಿತ್ಯ ಸಂಸ್ಕೃತಿ ಬೆಳೆಸುವರು
ಕುವೆಂಪು ಬೇಂದ್ರೆ ಮಾಸ್ತಿಯರು
ಸಾಹಿತ್ಯ ಉಜ್ವಲ ಗೊಳಿಸಿಹರು ||
ವಜ್ರ ಮುಕುಟವಿದೆ ನಮ್ಮ ಭಾರತಿಗೆ
ರತ್ನ ಮುಕುಟವಿದೆ ಕನ್ನಡ ತಾಯಿಗೆ
ವಿಶ್ವವನ್ನೇ ಮುಟ್ಟಿದ ಕೀರ್ತಿಯು ನಮ್ಮದು
ವಿಶ್ವಖ್ಯಾತಿ ಅಮರ ಅಮರವು ||
*****