ಆತ್ಮ ದೇಹಗಳದೇ ಒಂದು ಇತಿಹಾಸ
ಇವುಗಳ ನಡುವಿನ ಹೋರಾಟ ದೊಡ್ಡ ಸಹಾಸ
ಇಂದ್ರಿಯಗಳತ್ತ ಸರಿಯುವುದು ಪ್ರೇಯಸ್ಸು
ಆತ್ಮ ಅನುರಾಗದ ಚಿಂತನೆಯೇ ಶ್ರೇಯಸ್ಸು
ಅನಾತ್ಮನಾಗುವುದೆಂದರೆ ದೇಹ ಭಾವ
ಆತ್ಮ ಅನುಭವಿಸುವಿಕೆ ದೇವ ಭಾವ
ನಿತ್ಯವೂ ನಾವು ನಮ್ಮೊಂದಿಗಿನ ಯುದ್ಧ
ಈ ಅಂತರಂಗದ ದಾಳಿಗೆ ನೀನಿರಬೇಕು ಸಿದ್ಧ
ಪ್ರವತ್ತಿ ಮಾರ್ಗ ಅನುಸರಿಸದರೆ ಅಲ್ಪ ಸುಖ
ನಿವರ್ತ್ತಿ ಮಾರ್ಗ ಪಡೆದರೆ ಸದಾ ಸುಖ
ಬಾಹ್ಯ ಸುಖಗಳೆಲ್ಲ ಅದು ಕೇವಲ ಭ್ರಮೆ
ಅಂತರ ಆನಂದಗಳೆಲ್ಲ ಶಮ ದಮೆ
ಆತ್ಮನಿಗುಂಟು ಹಗಲು ರಾತ್ರಿಗಳು
ಹಗಲಿನಲಿ ಹೇಗಾದರೂ ಭಯವಿಲ್ಲ
ರಾತ್ರಿಗಳ ಹೆದ್ದಾರಿಯಲಿ ಬರೀ ಖಾತ್ರಿಗಳು
ಎಚ್ಚರವಿರದೆ ಆತ್ಮಗೆ ಉಳಿಗಾಲವಿಲ್ಲ
ನಮ್ಮನ್ನೆ ನಾವ ಕಾಪಾಡಿಕೊಳ್ಳಬೇಕು
ಯಾವದನ್ನು ಎಚ್ಚರದಿ ಪಡೆಯಬೇಕು
ನಾವಿಲ್ಲಿ ಶಾಶ್ವತವಾಗಿರಲು ಬಂದಿಲ್ಲ
ಮಾಣಿಕ್ಯ ವಿಠಲನಾಗಲು ದುಡೀಬೇಕು ಇನ್ನೊಂದು ಇಂಚಿಲ್ಲ
*****