ಸಂಕ್ರಾಂತಿ

ಬಾಳೇ ಒಂದು ಸಂಕ್ರಾಂತಿ
ಬದುಕಿಗೆ ಇದು ಸಂಗಾತಿ
ಮೈ ಮನಗಳಲಿ ನವಿರೇಳುವ ಕ್ರಾಂತಿ
ಓಡಿಸುವುದು ಮನದ ಭ್ರಾಂತಿ

ಆತ್ಮದತ್ತ ಮನವು ವಾಲಬೇಕು
ಪ್ರೀತಿಯತ್ತ ಬುದ್ಧಿವಾಲಬೇಕು
ದೇವರತ್ತ ಇಂದ್ರಿಯ ವಾಲಬೇಕು
ಆತ್ಮವು ಪರಮಾತ್ಮನತ್ತ ಸಾಗಬೇಕು

ಮಕರ ಸಂಕ್ರಮಣ ಭಾನು ಕಾರಣ
ಅದುವೆ ದಕ್ಷಿಣದಿಂದ ಉತ್ತರಾಯಣ
ಮನ ಇಂದ್ರಿಯದತ್ತವಿದ್ದರೆ ದಕ್ಷಿಣಾಯಣ
ಚಿತ್ತ ದೇವರತ್ತ ಸರಿದರೆ ಉತ್ತರಾಯಣ

ಎಳ್ಳು ಬೆಲ್ಲಗಳ ಸಂಗಮದ ಹಬ್ಬ
ಮನಸ್ಸು ಆತ್ಮಗಳ ಸಮ್ಮಿಲನದ ದಿಬ್ಬ
ಜೀವನ ವಿಕಾಸವೇ ಅದು ಸೌರಭ
ಮಾಣಿಕ್ಯ ವಿಠಲನಿಗಿಲ್ಲ ಮಬ್ಬ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಲಿಗುಲ: ‘ನಾನಿನ್ನೂ ಬದುಕಿದ್ದೇನೆ!’
Next post ಸಂಕ್ರಾಂತಿ

ಸಣ್ಣ ಕತೆ

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…