ನಿನ್ನ ಮನವು ನಿ ಹೇಳಿದಂತಿರಬೇಕು
ನೀನು ನಿಂತಲ್ಲಿ ಮನ ಸ್ತಿರವಾಗಿರಬೇಕು
ದೇವ ನಾಮದ ಗೂಟಕ್ಕೆ ಮನವ ಹೊಂದಿಸು
ವಿಷಯ ಸುಖದಲ್ಲಿ ಮೇಯದಂತೆ ನಿಗಾ ಇರಿಸು
ಮನದ ತನುವಿಗೆ ಕಾವಿ ಅಂಬರ ತೊಡಿಸು
ಹಗಲಿರುಳು ಸನ್ಯಾಸದ ದೀಕ್ಷೆ ಕೊಡಿಸು
ಇಂದ್ರಿಯ ಬಾಗಿಲದತ್ತ ಸುಳಿಯದಂತೆ ಇರಿಸು
ಬುದ್ಧಿಯ ಕಸರತ್ತಿನಲಿ ದಕ್ಷತೆ ವಹಿಸು
ಈ ಮನಸ್ಸು ನಿನ್ನ ಈಗಿನ ನಂಟಲ್ಲ
ಜನ್ಮ ಜನ್ಮಕ್ಕು ಗಂಟುಬಿದ್ದ ಈ ಗೆಳೆಯ
ಪ್ರತಿ ಜನ್ಮದಲ್ಲೂ ಭೋಗದಲಿ ತೇಲಿಸಿದವ
ಈಗಲೂ ಆಡುತಿಹ ಅದೇ ಆಟ ಹಳೆಯ
ಮೃತ್ಯೂ ನಿನ್ನ ಇನ್ನೊಂದು ಜನ್ಮ ಬೀಜ
ಈ ಬೀಜ ಬಿತ್ತುವ ಮುನ್ನ ಬೇಯಿಸಬೇಕು
ಸುಟ್ಟ ಕಾಳು ಮತ್ತೆಂದೂ ಮೊಳಕೆಯೊಡೆಯದು
ಮಾಣಿಕ್ಯ ವಿಠಲನಾಗಿ ನಿತ್ಯ ಭಜಿಸಬೇಕು
*****