ಮಾನವ ನೀನೇಕೆ ಆದೆ ಸ್ವಾರ್ಥಿ
ಕ್ಷಣಿಕ ಸುಖಾಸೆಗೆ ಫಕೀರನಾದೆ
ಬಿದ್ದು ಹೋಗುವ ದೇಹಕ್ಕೆ ಮೋಹಿಸಿದೆ
ನಿನ್ನ ಭೋಗಲಾಲಸೆಗೆ ಪರಾಧೀನನಾಂದೆ
ನಿನ್ನ ಸಂಚಯನಕೆ ಕೊನೆ ಮೊದಲಿಲ್ಲ
ನಿನ್ನ ಬಯಕೆಗಳಿಗೆ ಕೊನೆಗಾಲವಿಲ್ಲ
ದೇವರ ನಾಮವೆ ನಿನಗೆ ವಿಷವಾನ
ದಾನವೆಂಬುದು ನೀನು ಅರಿತಿಲ್ಲ
ಚಂದ್ರ ಸೂರ್‍ಯ ತಾರೆ ಕಂಡಿಲ್ಲವೆ
ಬೆಳಕನ್ನು ನೀಡುತ್ತಿರೆ ಮೌನವಾಗಿ
ಭೂಮಿ ವೃಕ್ಷ ಸಾಗರ ಕಂಡಿಲ್ಲವೆ
ಧಾನ್ಯ ಫಲ ಜಲ ಧಾರೆ ಮೌನವಾಗಿ
ಹರಿ ನೀನು ನೀಡಿದನ್ನೆ ನಾ ಕೊಡಲಾರೆ
ಕಂಡು ಕಂಡು ಬಾವಿಗೆ ಬೀಳುತ್ತಿರುವೆ
ಇದೆಲ್ಲವೂ ನಾಟಕ ಯಾರು ನಿನ್ನವರಲ್ಲ
ಮಾಣಿಕ್ಯ ವಿಠಲನಾಗಿ ಕೇಳುತ್ತಿರುವೆ
*****