ಕರುನಾಡು ಸ್ವರ್ಗವೇನೆ
ಕನ್ನಡವು ಜೇನು ತಾನೆ
ಇಂಥ ಮಣ್ಣಲ್ಲಿ ಪಡೆದ ಕಣ್ಣಲ್ಲಿ
ಏನಿಲ್ಲ ಹೇಳು ನೀನೆ!
ನೂರಾರು ಕವಿಗಳಿಲ್ಲಿ
ಸಾವಿರದ ಪದಗಳಲ್ಲಿ
ಬೆಳೆದ ಹಸಿರಲಿ ಪಡೆದ ಉಸಿರಲಿ
ಚಿರವಾಯ್ತು ಕಲ್ಪವಲ್ಲಿ;
ಕರಿಮಣ್ಣ ಒಡಲಿನಲ್ಲಿ
ನೂರಾರು ರಾಗ ಇಲ್ಲಿ
ದಣಿವಿರದ ಮೋಡಿಯಲ್ಲಿ
ಜಗವ ಸೆಳೆಯಿತು ಮಧುರ ಮಾಡಿತು
ಎಲ್ಲೆಲ್ಲು ಸ್ವರವ ಚೆಲ್ಲಿ;
ಸರಿಗಮದ ಹನಿಗಳಲ್ಲಿ
ತ್ಯಾಗಕ್ಕೆ ಹೆಸರು ಗೊಮ್ಟ
ಅಚಲತೆಗೆ ಗೋಲ ಗುಮ್ಟ
ಶಿಲ್ಪ ಕುಣಿವುದು ಬುದ್ದಿ ಮಣಿವುದು
ಬೇಲೂರು ಹಂಪೆಯಲ್ಲಿ;
ತಕಧಿಮಿತೊ ತಾಳದಲ್ಲಿ
*****