ದೀಪದಿಂದ ದೀಪ ಹಚ್ಚು

ದೀಪದಿಂದ ದೀಪ ಹಚ್ಚು
ಬೆಳಗಲಿ ಬಾಳದೀವಿಗೆ
ಕಳೆದು ತಿಮಿರ ಬೆಳಕು ಬರಲಿ
ನಿತ್ಯ ನಮ್ಮ ಬಾಳಿಗೆ ||

ದೈವನಿತ್ತ ಪ್ರಕೃತಿ ನಮಗೆ
ಅದುವೆ ನಮಗೆ ತಾಯಿಯು
ಜೀವವುಳಿಸಿ ಬಾಳು ಕೊಡುವ
ಅದಕೆ ನಮಿಸು ನಿತ್ಯವು ||

ಸೂರ್ಯ ಚಂದ್ರ ತಾರಾಗಣವು
ನೋಡಲೆಷ್ಟು ಸುಂದರ
ಬೆಟ್ಟ ಗುಡ್ಡ ನದಿಯು ಜಲಧಿ
ದೇವ ಕೊಟ್ಟ ಸಿರಿವರ ||

ಮಳೆಯು ಇರಲಿ ಚಳಿಯು ಇರಲಿ
ಬಿಸಿಲು, ಗಾಳಿ ಬೀಸಲಿ
ಹದದ ಬಾಳೆ ಮುದವ ಕೊಡುವ
ಇವೆಲ್ಲವಿರಲಿ ಜೊತೆಯಲಿ ||

ಉಲಿವ ಹಕ್ಕಿ ಬೆಳಗೂ ಚುಕ್ಕಿ
ಬೆಳದಿಂಗಳ ಮೋದವು
ಎಂಥ ಚೆಲುವು ಎಂಥ ಮುದವು
ಎಂಥಹ ಸೌಂದರ್ಯವು ||

ಬೊಚ್ಚು ಬಾಯಿ ಹಾಲುಗಲ್ಲ
ಮಗುವ ನಗುವು ಸುಂದರ
ತರುವ ತಬ್ಬಿ ಬೆಳೆವ ಲತೆಗೆ
ಒಡಲೆಲ್ಲೆಡೆ ಕಾತುರ ||

ಇಷ್ಟು ಕೊಡುಗೆ ನೀಡಿದ
ಆ ದೈವ ನಮಗೆ ಅಗೋಚರ
ಭಕ್ತಿ ಭಾವದಿಂದ ಅವನ
ಭಜಿಸಿ ನಮಿಸೆ ಗೋಚರ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಂದು ಸಲ ಹೀಗಾಯಿತು
Next post ಕರುನಾಡು ಸ್ವರ್ಗವೇನೆ

ಸಣ್ಣ ಕತೆ

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಸಂಬಂಧ

    ದೆಹಲಿಯಲ್ಲಿ ವಿಪರೀತ ಚಳಿ. ಆ ದಿನ ವಿಪರೀತ ಮಂಜು ಕೂಡಾ ಕವಿದಿತ್ತು. ದೆಹಲಿಗೆ ಬರುವ ವಿಮಾನಗಳೆಲ್ಲಾ ತಡವಾಗಿ ಬರುತ್ತಿದ್ದವು. ಸರಿಯಾಗಿ ಲ್ಯಾಂಡಿಂಗ್ ಮಾಡಲಾಗದೆ ಫೈಲೆಟ್‌ಗಳು ಒದ್ದಾಡುತ್ತಿದ್ದರು. ದೆಹಲಿಯಿಂದ… Read more…