ನಿರ್ಧಿಷ್ಟ ಪಥದಲ್ಲಿ ತಿರುಗುವ ಗ್ರಹಗಳ ನಡುವಿನ ಹಾದಿಯಲ್ಲಿ ಅಡ್ಡ ಬರುವ ಸಣ್ಣ ಬಂಡೆಗಳಂತಹ ಮಿಟಿಯೋರಾಯ್ಡ್ಸ್ ಭೂಮಿಯ ವಾಯುಮಂಡಲ ಪ್ರವೇಶಿಸಿದಾಗ ಗಾಳಿಯ ಜತೆ ಸಂಘರ್ಷಕ್ಕೊಳಗಾಗುತ್ತವೆ. ತಿಕ್ಕಾಟದಿಂದ ಇವು ಉರಿಯತೊಡಗುತ್ತವೆ. ಭೂಮಿಗೆ ಗುರುತ್ವಾಕರ್ಷಣೆ ಇರುವುದರಿಂದ ಭೂಮಿ ಎಡೆಗೆ ಧಾವಿಸಿ ಮಿಂಚುವ ನಕ್ಷತ್ರಗಳಂತೆ ಕಂಡು ಕರಗಿ ಹೋಗುತ್ತವೆ. ಉರಿದು ಬೀಳುವ ಈ ಸ್ಥಿತಿಯಲ್ಲಿ ಇವಕ್ಕೆ ‘ಮೀಟಿಯೋರ್ಸ್’ ಉಲ್ಕೆಗಳೆಂದು ಕರೆಯಲಾಗುತ್ತದೆ.
ಇಂಥಹ ಅಸಂಖ್ಯಾತ ಉಲ್ಕೆಗಳ ಪಾತ ದಿನವೂ ಆಕಾಶದಲ್ಲಿ ನಡೆಯುತ್ತಲೇ ಇರುತ್ತದೆ. ಬೀಳುವ ನಕ್ಷತ್ರ ಉಲ್ಕೆಯು ಸಾವುನೋವಿನಂತಹ ವಿಪ್ಲವ ತರುತ್ತದೆನ್ನುವುದು ಜನಸಾಮಾನ್ಯರ ನಂಬಿಕೆಯಾಗಿದೆ. ಪ್ರತಿ ಮೂವತ್ಮೂರು ವರ್ಷಗಳ ಅಂತರದಲ್ಲಿ ಉಲ್ಕಾಪಾತ ಗಣನೀಯವಾಗಿ ಹೆಚ್ಚುತ್ತದೆಂದು ಖಗೋಳ ವಿಜ್ಞಾನಿಗಳ ಅಭಿಮತ. ಗಂಟೆಗೆ ೫೦ ರಿಂದ ೧೦೦ ರ ತನಕ ನವೆಂಬರ್ ತಿಂಗಳ ೧೮ ರ ಬೆಳಗಿನ ಜಾವ ೨-೧ಂ ಗಂಟೆಗೆ ಶಿಖರ ತಲುಪುವ ಈ ನಕ್ಷತ್ರ ಮಳೆ ಬರಿಕಣ್ಣಿಗೆ ವಿಜ್ಞಾನಿಗಳಿಗೆ ಕಂಡಿತು. ಲಿಯೋನಿಡ್ ಮಿಟಿಯೋರಾಯ್ಡ್ಸ್ ಎಂದು ವಿಜ್ಞಾನಿಗಳು ಹೆಸರಿಸಿರುವ ಈ ಆಕಾಶಕಾಯಗಳು ‘ಟೆಂಪಲ್‌ಟಟ್ಸ್’ ಎನ್ನುವ ಧೂಮಕೇತು ಉಳಿಸಿ ಹೋದ ಧೂಳು ಕಸದಿಂದ ನಿರ್ಮಾಣವಾದವು. ಭೂಮಿಯ ಮೇಲ್ಮೈ ತಲುಪುವ ವೇಳೆಗಾಗಲೇ ಉಷ್ಣತೆ ಕಳೆದುಕೊಂಡು ಮತ್ತೆ ಬಂಡೆಗಳಂತಾದಾಗ ಉಲ್ಕೆಗಳನ್ನು ಮಿಟಿಯೋರೈಟ್ಸ್ ಎಂದು ಕರೆಯುತ್ತಾರೆ. ಲೋಹ ರಾಸಾಯನಿಕಗಳ ಕಲ್ಲು ಧೂಳುನಿಂದ ಕೂಡಿದ ಉಲ್ಕೆಗಳು ಜೀವ ಸೃಷ್ಟಿಗೆ ಬೇಕಾದ ಕಚ್ಚಾ ಪದಾರ್ಥಗಳನ್ನು ಒದಗಿಸಬಲ್ಲವು ಎನ್ನುತ್ತಾರೆ. ಖಗೋಳ ವಿಜ್ಞಾನಿಗಳು. ೩೬ ವರ್ಷಗಳಿಗೊಮ್ಮೆ ಪಾತಗೊಳ್ಳುವ ಈ ಉಲ್ಕೆಗಳ ದೃಷ್ಟಿಯಿಂದ ಇದುವರೆಗೆ ಅಪಾಯಗಳಾದ ವರದಿಗಳಿಲ್ಲ.
*****