ಏಕಿಷ್ಟು ದೂರ ಮಾಡಿದೆ ಎನ್ನ
ಸಣ್ಣದೊಂದು ಮಾತಿಗೆ|
ನಮ್ಮ ಮಧುರ ಪ್ರೀತಿಯನೇ
ಮರೆತುಬಿಟ್ಟೆಯಾ ನನ್ನೊಂದು
ಹುಸಿ ಪಿಸುಮಾತಿಗೆ||
ನೀನು ಎಷ್ಟಾದರೂ…ಹೇಗಾದರೂ
ತಮಾಷೆ ಮಾಡಿ ನಗಬಹುದು |
ನೀನು ಏನಾದರು
ಅನ್ನಬಹುದು ನನ್ನಮೇಲೆ|
ಆದರೆ ನಾನು ಮಾತ್ರ ಊ ಹ್ಞೂ..!
ಕೋಪ ನಿನ್ನ ಮೂಗಿನ ತುದಿಮೇಲೆ||
ಹೆಣ್ಣೆಂದರೆ ಅಗ್ಗದ ವಸ್ತುವು ನಿನಗೆ
ಹೆಣ್ಣೆಂದರೆ ತಮಾಷೆ ಸರಕು ಗಂಡಿಗೆ|
ಈ ತಾರತಮ್ಯ ಬೇಧ ಸಾಕು
ನಮಗೂ ಸಮಾನತೆ,
ಸ್ವಾತಂತ್ರ ವಿರಬೇಕು||
ಕೋಪದಲಿ ಕೊಯ್ದ ಮೂಗು
ಶಾಂತಿಯಲಿ ಬರುವುದೆ?
ಒಮ್ಮೆ ಮುತ್ತು ಒಡೆದಮೇಲೆ
ಬೆಸೆಯಲದು ಚೆಂದವೇ?|
ಒಮ್ಮೆ ಹೃದಯಬಂಧ
ಮುರಿದಾದ ಮೇಲೆ
ಅದು ಬೆಸೆಯಲದು ಸಾಧ್ಯವೇ||
*****