ಹೆಣ್ಣಾಗಿ ಜನ್ಮನೀಡಿ
ಹೆತ್ತ ಕುಡಿಗೆ ಹಸಿವ ನೀಗಿಸೇ
ನಿನ್ನ ಸೌಂದರ್ಯ ಕೆಡುವುದೆಂಬ
ಅಲ್ಪತನದ ಸೌಂದರ್ಯ ಪ್ರಜ್ಞೆಗೆ
ಅಜ್ಞಾನವೆನ್ನುವುದೇ ಸರಿ|
ಅತಿಥಿಯಾಗಿ ಅಲ್ಪಸಮಯದಿ
ಬಂದುಹೋಗುವ ಯೌವನಕೆ
ಏಕಿಂತ ವ್ಯಾಕುಲತೆ||
ಅಮ್ಮನೆನಿಸುವ ಭಾಗ್ಯ
ಎಲ್ಲರಿಗೂ ಸಿಗುವುದಿಲ್ಲ|
ಸುಖಕೆ ಮಗುವ ಹೆತ್ತರೆ
ತಾಯಿಯಾಗುವುದಿಲ್ಲ|
ಹಗಲು ರಾತ್ರಿ ನಿದ್ದೆಗೆಡಬೇಕು
ಕಷ್ಟ ಪಡಬೇಕು, ಇಷ್ಟಾರ್ಥಗಳನ್ನೆಲ್ಲ
ಆ ಕಂದಮ್ಮನಿಗಾಗಿ ಬದಿಗಿಡಲುಬೇಕು|
ಎಷ್ಟುಜನ್ಮದ ಪುಣ್ಯದ ಫಲವೊ ನೀ
ತಾಯಿಯಾಗಿರುವುದು||
ನಿನ್ನನೇ ನಂಬಿ ಹುಟ್ಟಿರುವ
ಕಂದನಾ ಹಸಿವ ತಣಿಸೆ ಆಗದಿರೆ
ನಿನ್ನ ಹೆಣ್ತನಕೆ ಧಿಕ್ಕಾರವಿರಲಿ|
ನಿನ್ನ ನಿರಾಧಾರ ಸೌಂದರ್ಯ
ಕೀಳು ಪ್ರಜ್ಞೆಗೆ ಧಿಕ್ಕಾರವಿರಲಿ|
ನಿನ್ನಂತೆ ಎಲ್ಲ ತಾಯಂದಿರು
ಅಲ್ಪತನದಲಿ ಯೋಚಿಸಿದರೆ
ಮಾನವಜನ್ಮದ ಮುಂದಿನ ಗತಿಯೇನು?
ಸ್ತ್ರೀಗೆ ಸಮಾಜದಲಿ ಬೆಲೆ ಇನ್ನೇನು?||
*****