ಅಪರಾಧಿಗಲ್ಲವೇ ಶಿಕ್ಷೆ?
ನಿರಪರಾಧಿಗಳಿಗೇತಕೆ ಶಿಕ್ಷೆ|
ಮಾಡಿದ ತಪ್ಪಿಗಲ್ಲವೆ ದಂಡ
ನೋಡಿದ ಸತ್ಯಕೇತಕೆ ದಂಡ||
ಮನುಜ ಅಧರ್ಮದಿ ನಡೆದು
ತನ್ನ ಸ್ವಾರ್ಥಸಾದನೆಗೆ
ಏನಬೇಕಾದರು ಮಾಡುವನು
ಹೇಗೆ ಬೇಕಾದರು ಸುಳ್ಳ ಹೇಳುವನು|
ಧರ್ಮದಿ ಬದುಕುವ ಜನರ
ಬಲಿಪಶುವ ಮಾಡಿ
ಅಟ್ಟಾಹಾಸದಿ ಮೆರೆಯುವನು||
ಕೋತಿ ಮೊಸರನು ತಿಂದು
ಮೇಕೆ ಬಾಯಿಗೆ ವರಸಿದಂತೆ|
ಹಣವಂತರು ಅಧಿಕಾರಿಗಳಕೊಂಡು,
ಸತ್ಯಸಾಕ್ಷಾಧಾರಗಳ ತಿರುಚಲಾಗಿ|
ನ್ಯಾಯ ಧರ್ಮ ನಡುಗಿ ನರಳುತಿದೆ
ಅಧರ್ಮ ಆರ್ಭಟಿಸುತ್ತಿದೆ||
ಕೃಷ್ಣಾ ನೀನು ಬರಲೇ ಬೇಕು
ಮತ್ತೆ ಧರ್ಮ ಸಂಸ್ಥಾಪನೆಯಾಗಬೇಕು|
ಇವರ ದರ್ಪ, ದೌರ್ಜನ್ಯ
ಕೊನೆಗಾಣಬೇಕು, ನೊಂದವರ
ಕಣ್ಣೀರು ನಿಲ್ಲಲೇಬೇಕು|
ಸಂಭವಾಮಿ ಯುಗೇ ಯುಗೇ ಆಗಲೇಬೇಕು||
*****