ಒಂದು ಮನೋವೈಜ್ಞಾನಿಕ ವಿಶ್ಲೇಷಣೆ : ಹಿಂಸಾತ್ಮಕ ಕ್ರಿಯೆಗೆ ಸಿರೋಟೋನಿನ್ ಅಭಾವವೇ ಕಾರಣ

ಒಂದು ಮನೋವೈಜ್ಞಾನಿಕ ವಿಶ್ಲೇಷಣೆ : ಹಿಂಸಾತ್ಮಕ ಕ್ರಿಯೆಗೆ ಸಿರೋಟೋನಿನ್ ಅಭಾವವೇ ಕಾರಣ

ಜಗತ್ತಿನಲ್ಲಿ ದಿನನಿತ್ಯ ಹಿಂಸಾತ್ಮಕ ಕ್ರಿಯೆಗಳು ನಡೆಯುತ್ತಲೇ ಇರುತ್ತವೆ. ಒಬ್ಬ ವ್ಯಕ್ತಿ ನಿರ್ಧಯಿಯಾಗಿ ಅನೇಕ ವ್ಯಕ್ತಿಗಳನ್ನು ಕೊಲೆಗೈದು, ಅತ್ಯಾಚಾರವೆಸಗಿ, ರಕ್ತ ಪಿಪಾಸಿಯಾಗಿ ನಿರಂತರವಾಗಿ ನಡೆದುಕೊಳ್ಳುತ್ತಲೇ ಇರುತ್ತಾನೆ. ಇವನಲ್ಲಿ ಕರುಣೆ, ವಾತ್ಸಲ್ಯ, ಮಾನವತಾವಾದಗಳೆಲ್ಲ ಬತ್ತಿ ಕೇವಲ ಕ್ರೌರ್ಯ, ಹಿಂಸೆ, ನಿಷ್ಕರುಣೆಗಳು ಮಡುಗಟ್ಟಿರುತ್ತವೆ. ಏಕೆ ಹೀಗೆ ಈ ವ್ಯಕ್ತಿಗಳು ಮೆದುಳಿನ ಸಂದೇಶಗಳಲ್ಲಿ ಏನಾದರೂ ತಪ್ಪಾಗಿ ಹೀಗೆ ವರ್ತಿಸುತ್ತಿರಬಹುದೇ? ಎಂದು ಸಂಶೋಧನೆಗಳು ನಡೆದವು.

ಹಿಂಸಾತ್ಮಕ ಅಪರಾಧಗಳನ್ನು ಮಾಡುವವರ ಮೆದುಳಿನಲ್ಲಿ ಕೆಲವೊಂದು ಅಪಾಯಕಾರಿ ಲೋಹಗಳಿರುವುದನ್ನು ಇಬ್ಬರು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಲೋಹಮಾಲಿನ್ಯವುಳ್ಳ ರಾಷ್ಟ್ರಗಳಲ್ಲಿ ಹೆಚ್ಚಿನ ಪ್ರಮಾಣದ ಹಿಂಸಾಚಾರಗಳು ನಡೆದಿರುವ ನಿದರ್ಶನಗಳಿವೆ. ಕ್ಯಾಲಿಪೋರ್ನಿಯಾದಲ್ಲಿ ಜೇಮ್ಸ್ ಆಲಿವರ್ ಹಬರ್ಟ್ ಎಂಬಾತ ೧೯೮೪ ರಲ್ಲಿ ೨೧ ಜನರ ಸಮೂಹವನ್ನು ಕೊಲೆಮಾಡಿದ. ಆತನ ಕೂದಲಿನ ರಾಸಾಯನಿಕ ರಚನೆಯನ್ನು ಪರೀಕ್ಷಿಸಿದಾಗ ಅದರಲ್ಲಿ ಹೆಚ್ಚಿನ ಪ್ರಮಾಣದ ‘ಕ್ಯಾಡ್ಮಿಯಂ’ ಇದ್ದದ್ದು ಕಂಡು ಬಂದಿತು. ಕ್ಯಾಡ್ಮಿಯಂ ಲೋಹವು ಮೂತ್ರ ಜನಕಾಂಗವನ್ನು ನಾಶಮಾಡುತ್ತದೆ. ಹಬರ್ಟಿಯ ಮೂತ್ರ ಜನಕಾಂಗವನ್ನು ಪರೀಕ್ಷಿಸಿದಾಗ ಅದು ಮೊದಲೇ ಸಾಕಷ್ಟು ನಾಶವಾಗಿದ್ದುದು ಕಂಡು ಬಂದಿತು. ಇಲನೋಯಿಸ್‌ನ ಪಿಫೀಫರ್ ಚಿಕಿತ್ಸಾ ಕೇಂದ್ರ ಅಧ್ಯಕ್ಷರಾದ ವಿಲಿಯಂ.ಜೆ. ವಾಲ್ಫ್ ಅವರು ಇಂಥಹ ಅನೇಕ ನಿದರ್ಶನಗಳನ್ನು ಕಂಡಿದ್ದಾರೆ. ಶರೀರವು ಕೆಲವೊಂದು ಅಪಾಯಕಾರಿ ಲೋಹಗಳನ್ನು ನಿಭಾಯಿಸಲು ಸಾಧ್ಯವಾಗದೇ ಇದ್ದಾಗ ಮನುಷ್ಯನಿಗೆ ಸರಿ, ತಪ್ಪುಗಳ ಪರಿಕಲ್ಪನೆ ಇಲ್ಲದಂತಾಗುತ್ತದೆ ಎಂದು ಅವರು ಹೇಳುತ್ತಾರೆ. ೧೯೮೯ ರಲ್ಲಿ ಪಿಫೀಫರ್‌ನಲ್ಲಿ ಅನೇಕ ಹಿಂಸಾಚಾರಿ ಮಕ್ಕಳನ್ನು ಗಮನಿಸಲಾಯಿತು. ಇವರೆಲ್ಲ ತಮ್ಮ ೨ ವರ್ಷದ ವಯಸ್ಸಿನಿಂದಲೇ ಬೆಕ್ಕುಗಳಿಗೆ ಅತೀವ ಹಿಂಸೆ ಕೊಡುತ್ತಿದ್ದುದನ್ನು ಗಮನಿಸಿ ಅವರಿಗೆ ಕೊಡುತ್ತಿದ್ದ ಆಹಾರವನ್ನು ನಿಯಂತ್ರಿಸಿ ಅವರ ವರ್ತನೆಗಳನ್ನು ಹಿಡಿತಗೊಳಿಸಲಾಯಿತು.

ಡಾರ್ಟ್‌ಮೌಲ್ ಕಾಲೇಜಿನ ಪ್ರಾಧ್ಯಾಪಕರಾದ ರೆವೀಗರ್ ಡಿ- ಮಾಸ್ಟರ್‍ಸ್ ಎಂಬುವವರು ಇದೇ ರೀತಿಯಾದ ಸಂಶೋಧನೆಗಳನ್ನು ಮಾಡಿ ದೃಡೀಕರಿಸಿದ್ದಾರೆ. ಸೀಸ ಮತ್ತು ಮ್ಯಾಂಗನೀಸ್‌ಗಳು ಸಹ ಮೆದುಳಿನ ರಾಸಾಯನಿಕ ರಚನೆಯಲ್ಲಿ ಬದಲಾವಣೆಗಳನ್ನು ಮಾಡಿ ಕಲಿಕೆಯ ಸಮಸ್ಯೆಗಳು, ವರಟು ವರ್ತನೆ, ಹಿಂಸೆ ಇತ್ಯಾದಿಗಳಿಗೆ ಕಾರಣವಾಗುವವು ಎಂದು ಕಂಡು ಹಿಡಿಯಲಾಯಿತು. ಕೆಲವೊಂದು ಗ್ರಾಮೀಣ ಬಾಲಕರಲ್ಲಿ ಬುದ್ಧಮಾಂದ್ಯತೆಗೂ ಇದು ಕಾರಣವಾಗಿದೆ, ಎಂದು ತಿಳಿದು ಬರುತ್ತದೆ. ಮ್ಯಾಂಗನೀಜ್‌ನಿಂದ ಮಾನಸಿಕ ಪ್ರತಿಕ್ರಿಯೆಗಳ ನಿಯಂತ್ರಣವು ಕ್ಷೀಣಿಸಿ ಹಿಂಸಾತ್ಮಕ ವರ್ತನೆ ತೋರುವುದೆಂದು ತಿಳಿದು ಬಂದಿದೆ. ಸೀಸ ಮತ್ತು ಮ್ಯಾಂಗನೀಸ್‌ಗಳು ಎಲ್ಲ ಕಡೆ ಹರಡುತ್ತಲಿವೆ. ನರವಿಜ್ಞಾನಿಗಳ ಪ್ರಕಾರ ಮ್ಯಾಂಗನೀಸ್ ವಸ್ತುವು ಮೆದುಳಿನಲ್ಲಿರುವ ‘ಸಿರೋಟೋನಿನ್’ ಎಂಬ ಪದಾರ್ಥದ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದೊಂದು ನರಪ್ರಸರಣ ದ್ರವ (Neurotransmitter) ಮೆದುಳಿನ ಸಂದೇಶಗಳು ಪ್ರಸಾರವಾಗಲು ಈ ದ್ರವವೇ ಕಾರಣವಾಗುತ್ತದೆ. ಮಾಸ್ಟರ್ಸ್ ಅವರ ಪ್ರಕಾರ ಎಲ್ಲ ಹಿಂಸಾತ್ಮಕ (ಒರಟುತನ, ಅಪತ್ಕಾರಿತನ) ಮತ್ತು ಇತರ ಮನೋವೈಜ್ಞಾನಿಕ ತೊಂದರೆಗಳಿಗೆ ಸಿರೋಟೋನಿನ್‌ನ ಕೊರತೆಯೇ ಕಾರಣವಾಗಿದೆ. ಸರಿಯಾದ ವಿಟಾಮಿನ್‌ಗಳ ಪೂರೈಕೆಗಳಿಂದ ಈ ವೈಪರೀತ್ಯವನ್ನು ಸರಿಪಡಿಸಿಬಹುದೆಂದು ಅವರು ಹೇಳುತ್ತಾರೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪೂಜ್ಯ ತಟ್ಟೆಯೊಳಿದೇನು ಶಬ್ದ?
Next post ಅಪರಾಧಿಗಲ್ಲವೇ ಶಿಕ್ಷೆ?

ಸಣ್ಣ ಕತೆ

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…