ಆರತಿ ಬೆಳಗುವೆನು ಯೋಗದ
ಆರುತಿ ಬೆಳಗುವೆನು || ಪ ||
ಆರುತಿ ಬೆಳಗುವೆ ಪರಮಾರ್ಥದ
ಸಾರವ ತಿಳಿದಿನ್ನು ತಾರಕ ಬ್ರಹ್ಮಗೆ || ಆ. ಪ. ||
ಗುದಗುಹ್ಹೆಗಳನೊತ್ತಿ ಮೇಲಕೆ
ಚದುರತನದಲಿ ಹತ್ತಿ
ಸದರ ಮನಿಯೊಳು ನದರಿಟ್ಟು ಮೋಡಲು
ಎದುರಿಗೆ ಕಾಂಬುವ ಸದಮಲ ಬ್ರಹ್ಮಗೆ || ೧ ||
ಈಡೆಯನ್ನು ತಡೆದು ಪಿಂಗಳ-
ನಾಡಿ ದಾರಿ ಹಿಡಿದು
ಕೂಡಿಸಿ ಸ್ವಾಸವ ನೋಡಲು ಅಗ್ನಿಯ
ಗೂಡಿನ ಒಳಗೆ ಜ್ಯೋತಿ ಮೂಡಿರು ಬ್ರಹ್ಮಗೆ || ೨ ||
ಚಂದ್ರ ಸೂರ್ಯರೊಂದುಗೂಡಿಸಿ
ಒಂದೆ ಸ್ಥಲದಿ ನಿಂದು
ಚಂದದಿ ನೋಡಲು ಕಂಡು ವೀರನಿಗೆ
ಮುಂದೆ ಪ್ರಕಾಶಿಪಾನಂದದ ಬ್ರಹ್ಮಗೆ || ೩ ||
ಜ್ಞಾನಖಡ್ಗ ಹಿಡಿದು
ಮಾಯವೆಂಬ ಮಲವ ಕಡಿದು
ಮೌನದಿಂದ ಶಿಶುನಾಳಧೀಶನ
ಧ್ಯಾನಮಾಡಿ ಗೋವಿಂದರಾಜಗೆ || ೪ ||
*****