೧ ಮನವು ನಿನಗಾಗಿಯೇ ಮೊರೆಯುತಿದೆಯೇ-ಚಿನ್ನ ನೆನಹು ನಿಡುಸುಯಿಲುಗಳ ಕರೆಯುತಿದೆಯೆ? ಕನಸು ನಿನ್ನದೆ ಚಿತ್ರ ಬರೆಯುತಿದೆಯೇ-ನಿನ್ನ ಇನಿದುದನಿ ಕಿವಿಗಳನ್ನು ಕೊರೆಯುತ್ತಿದೆಯೆ! ೨ ತೆಳುದುಟಿಯ ತಿಳಿಜೊಲ್ಲು, ಬಿಳಿಯ ಮೊಳೆವಲ್ಲು – ಆ ಎಳಗಲ್ಲಗಳ ...

ಕೆಟ್ಟು ಒಳ್ಳೆಯವನು ಎಂದೆನಿಸಿಕ್ಕೊಳ್ಳುವುದಕಿಂತ ಪೆಟ್ಟುತಿಂದು ಜಾಣನಾಗುವುದಕ್ಕಿಂತ | ಹಾಗೆಯೇ ಎನ್ನ ಒಳ್ಳೆಯವನೆಂದೆನಿಸು ಛೀ…ಥೂ ಎಂದೆನಿಸದೆ ಎನ್ನ ನೀ ಬೆಳೆಸು|| ಕೆಟ್ಟಮೇಲೆ ಬುದ್ಧಿ ಬರುವುದಕ್ಕಿಂತ ಕೈಸುಟ್ಟಮೇಲೆ ಅರಿವುಮೂಡುವುದಕ್ಕಿಂತ...

ಯಾರ ಜೊತೆ ಆಡಲಿ? ಯಾರ ಜೊತೆ ಮಾತಾಡಲಿ? ಕಾಲಿಟ್ಟ ಕಡೆಯಲ್ಲಿ ಹುಟ್ಟುತಿವೆ ಗೋಡೆಗಳು! ಗೋಡೆಗಳ ತಡಕಿದರೆ ಕಿಟಕಿ ಕಂಡಿಗಳಿಲ್ಲ ಎತ್ತ ಸುತ್ತಿದರೂ ಇಲ್ಲಿ ಬಾಗಿಲುಗಳೇ ಇಲ್ಲ! ಸಾಲು ಗೋಡೆಗಳಲ್ಲಿ ನೋವು ತುಂಬಿದ ನಾವು ಕೂಗಿ ಕರೆದರೂ ಇಲ್ಲಿ ಉತ್ತರವೇ ಇಲ...

ಯಾರಿವರು ಈ ನಂಜನಗೂಡು ತಿರುಮಲಾಂಬಾ ? ಇವರೇ ಹೊಸಗನ್ನಡ ಸಾಹಿತ್ಯದ ಮೊದಲ ಕವಯತ್ರಿ, ಕಾದಂಬರಿಗಾರ್ತಿ, ಪತ್ರಕರ್ತೆ, ಪ್ರಕಾಶಕಿ ಏನೆಲ್ಲಾ. ಅಬ್ಬಾ! ೧೯ನೇ ಶತಮಾನದ ಅಂತ್ಯದಲ್ಲಿಯೇ ಒಬ್ಬ ಹೆಣ್ಣುಮಗಳು ಇಷ್ಟೆಲ್ಲಾ ಮಾಡಲು ಅವಕಾಶವಿತ್ತೆ? ಅನ್ನಿಸುವುದ...

ಮಳೆರಾಯ ನೀ ಅಡಗಿರುವಿ ಎಲ್ಲಿ? ಕೇಳಿ ನಮ್ಮಯ ಮಾತು ಬೇಸಿಗೆ ಕಳೆದರೂ ಒಂದ್ ಹನಿ ಇಲ್ಲ. ಅಲ್ಲೇನ್ ಮಾಡುವಿ ಕೂತು ರೈತರು ಬಿತ್ತನೆ ಮಾಡಿ ಮುಗಿಯಿಸಿ ಪೈರನು ಕಾಯುವ ದಿನ ನೀರಲಿ ಆಡುವ ಬಯಕೆ ನಮ್ಮದು ಹಸಿರು ಬೆಟ್ಟ ನೋಡೆನು ಕುಡಿಯುವ ನೀರಿಗೆ ಬಂದಿದೆ ಕ...

ಕೋಳಿ ಕೂಗೊ ಮೊದಲೆ ಎದ್ದ ನಮ್ಮ ಪುಟ್ಟ ಅಜ್ಜಿಗ್ಹೇಳಿ ಟಾಟ ಸೈಕಲ್ ತುಳಿದು ಬಿಟ್ಟ ಪೇಪರ್ ಬಂಡಲ್ ಹಿಡಿದು ಸೈಕಲ್ಲಿಗೆ ಬಿಗಿದು ಟ್ರಿಣ್ ಟ್ರಿಣ್ ಸದ್ದು ಮಾಡಿ ಮುಂದಕ್ಹೋಯ್ತು ಗಾಡಿ ಪ್ರತಿಮನೆಗೂ ಹೋಗಿ ಪೇಪರ್ ಎಂದು ಕೂಗಿ ಸುದ್ದಿ ಮುಟ್ಟಿಸಿ ಪುಟ್ಟ ...

ಸುಮ್ಮನೆ ಬಿದ್ದಿರುವ ಉದ್ದುದ್ದ ಸರಹದ್ದು ಎತ್ತೆರತ್ತರಕ್ಕೆ ಬೆಳೆದ ದೇವದಾರುಗಳು ಅಸ್ತಿತ್ವ ಅಲುಗಾಡುವ ಯಾತನೆಗಳ ಮಧ್ಯೆ ಶಬ್ದ ಮೀರಿದ ಸಂಕಟಗಳ ನುಂಗಿ ದೀರ್ಘ ಬದುಕಿನ ವಿಷಾದಗಳ ಮರೆತು ಗುನಿಗುನಿಸಿ ಹಾಡುತ್ತಿದೆ ನೋಡು ಗಡಿಯಲ್ಲಿ ಸರಹದ್ದುಗಳೇ ಇಲ್...

ಮೂರು ಮೊಗಗಳು ಮಾತ್ರ ಎದುರಿಗೆ ಕಂಡರೂ ನಾಲ್ಕನೆಯ ಮೊಗ ಇದ್ದೇ ಇರುವುದು ಕಾಣುವುದರಾಚೆಗೇ ಕಾಣದುದು ಇರುವುದು ಕಾಣುವುದೆ ಮರೆ ಕಾಣದಿರುವುದಕೆ ಓ ಧರ್ಮಚಕ್ರವೇ ಕೈಹಿಡಿದು ನಡೆಸೆನ್ನನು ಸತ್ಯಮೇವ ಜಯತೆ ಒಂದು ಹಕ್ಕಿಯು ತಿನ್ನುತಿದ್ದರು ಇನ್ನೊಂದು ಹಕ್...

ಇಂದಿನ ಯುವ ಪೀಳಿಗೆ ಬಗ್ಗೆ ಕೇಳಿದರೆ, ಓದಿದರೆ, ನೋಡಿದರೆ ‘ಅಯ್ಯೋ ಪಾಪ!’ ಅನಿಸುವುದು. ದುಡ್ಡಿಗಾಗಿ ಏನೆಲ್ಲ ಮಾಡುತ್ತಿರುವರು… ಎಂದಾಗ ಇಲ್ಲಿ ಬರೆಯಲು ಮನಸ್ಸು ಬರುತ್ತಿಲ್ಲ. ಆ ರೀತಿ ನಡೆದುಕೊಳ್ಳುತ್ತಿರುವರು. ದುಡ್ಡೇ ದೊಡ್ಡಪ್ಪ. ದುಡ್ಡ...

ತಾಯ್‌ ಹೊಟ್ಟಿ ತಂಗಾಲಿ ತಾಯಿರಲಿ ದ್ರೌಪತಿ | ನೀಲಗೊಂಡೇದ ನಿರವೀರ | ಬಾಲನ ಮ್ಯಾಲ | ಶ್ರೀರಾಮರಿದ್ದಾ ರೊಂದಗಲಾದೆ ||೧|| ಎಂದೀಗಿ ಈ ಹಾಡ ಹೊಂದಿಸ್ತಿದ್ದಾರೆಂದು | ಅಂಗಳಕ ಬಂದು ತಿರಗೀನೆ | ಹ್ವಾದವರು | ಹಾಳು ದೇಗುಲದ ಕದವಾಗೆ ||೨|| ಎಂದೀಗಿ ಈ ...

1...678910...16

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...