ಯಾರ ಜೊತೆ ಆಡಲಿ?
ಯಾರ ಜೊತೆ ಮಾತಾಡಲಿ?
ಕಾಲಿಟ್ಟ ಕಡೆಯಲ್ಲಿ
ಹುಟ್ಟುತಿವೆ ಗೋಡೆಗಳು!
ಗೋಡೆಗಳ ತಡಕಿದರೆ
ಕಿಟಕಿ ಕಂಡಿಗಳಿಲ್ಲ
ಎತ್ತ ಸುತ್ತಿದರೂ ಇಲ್ಲಿ
ಬಾಗಿಲುಗಳೇ ಇಲ್ಲ!
ಸಾಲು ಗೋಡೆಗಳಲ್ಲಿ
ನೋವು ತುಂಬಿದ ನಾವು
ಕೂಗಿ ಕರೆದರೂ ಇಲ್ಲಿ
ಉತ್ತರವೇ ಇಲ್ಲ!
ಕೋಮು ಕಲ್ಲುಗಳಲ್ಲಿ
ಸರ್ಪಸುತ್ತಿನ ಕೋಟೆ
ನಾಳೆ ಕಾಣುವುದೆಂತು
ತಿಳಿಯಲಿಲ್ಲ!
*****