ಮಳೆರಾಯ ನೀ ಅಡಗಿರುವಿ ಎಲ್ಲಿ?
ಕೇಳಿ ನಮ್ಮಯ ಮಾತು
ಬೇಸಿಗೆ ಕಳೆದರೂ ಒಂದ್ ಹನಿ ಇಲ್ಲ.
ಅಲ್ಲೇನ್ ಮಾಡುವಿ ಕೂತು
ರೈತರು ಬಿತ್ತನೆ ಮಾಡಿ ಮುಗಿಯಿಸಿ
ಪೈರನು ಕಾಯುವ ದಿನ
ನೀರಲಿ ಆಡುವ ಬಯಕೆ ನಮ್ಮದು
ಹಸಿರು ಬೆಟ್ಟ ನೋಡೆನು
ಕುಡಿಯುವ ನೀರಿಗೆ ಬಂದಿದೆ ಕಷ್ಟ
ನಿನಗದು ತಿಳಿಯದೆ ಹೇಳು
ಪ್ರಾಣಿ ಪಕ್ಷಿಗಳ ಪರದಾಟ ನೋಡು
ತಪ್ಪಿಸು ಅವುಗಳ ಗೋಳು
ಎಷ್ಟಾದರೂ ಬಾ ಹೇಗಾದರೂ ಬಾ
ಶಾಲೆಯ ನಂತರ ಸುರಿ
ಆಟವ ಮುಗಿಸಿ ಉಲ್ಲಾಸ ತುಂಬಿಕೊಂಡು
ಮನೆ ಹೊಕ್ಕ ನಂತರ ಸರಿ
ಎಳೆಯರ ಪ್ರಾರ್ಥನೆಯ ನೀವ್ ಕೇಳಿ
ಬಾರೋ ಬಾ ಮಳೆರಾಯ
ಸಕಾಲಕೆ ನೀನು ಸುರಿದರೆ ನಾವೆಲ್ಲ
ಮರೆಯೆವು ನಿನ್ನ ಮಹರಾಯ
*****